ಹುಕ್ಕೇರಿ ಪಟ್ಟಣದಲ್ಲಿ ಹಾಡಹಗಲೇ ಸಂತೆ ಸಮಯದಲ್ಲಿ ಜನಸಂದಣಿ ನಡುವೆಯೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಹತ್ಯೆ ಮಡಿರುವ ಘಟನೆ ನಡೆದಿದ್ದು, ಇದನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಮಲಿಕ್ ಜಾನ್ ಜಮಖಂಡಿ ಎಂಬಾತ ದುಷ್ಕರ್ಮಿಗಳಿಂದ ಕೊಲೆಯಾದ ವ್ಯಕ್ತಿ. ಈತ ಹುಸೇನ್ ಸಾಬ್ ಜಮಖಂಡಿ ಮತ್ತು ಮೈಮೂನ್ ಬಿ ದಂಪತಿಯ ಮಗನಾಗಿದ್ದು, ಮೂಲತಃ ಗೋಕಾಕ್ ತಾಲೂಕಿನ ದೂಪದಾಳ ಗ್ರಾಮದವರು.
ಸುಮಾರು 25 ವರ್ಷಗಳಿಂದ ತಮ್ಮ ತಾಯಿಯ ತವರು ಮನೆ ಅವರಗೋಳ ಗ್ರಾಮದಲ್ಲಿ ವಾಸಿಸುತ್ತಿದ್ದರು. ಬೆಳಗಾವಿಯ ಅಶೋಕ ಐರನ್ ಫ್ಯಾಕ್ಟರಿಯಲ್ಲಿ ಉದ್ಯೋಗ ಮಾಡುತ್ತಿದ್ದ ಮಲಿಕ್ ಜಾನ್, ಕೆಲಸಕ್ಕೆ ತೆರಳುವ ವೇಳೆ, ಹುಕ್ಕೇರಿ ನಾಕಾದಲ್ಲಿ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾರೆ.
“ನಮ್ಮ ಊರಿನಲ್ಲಿ ಇಷ್ಟು ಭೀಕರ ಕೊಲೆ ನಡೆಯುವುದು ಇದೇ ಮೊದಲ ಬಾರಿಗೆ” ಎಂದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಘಟನೆಯ ಕೆಲವೇ ಗಂಟೆಗಳಲ್ಲಿ ಹುಕ್ಕೇರಿ ಪೊಲೀಸರು ಚುರುಕಾಗಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ರಮ ಸಂಬಂಧ ಹಾಗೂ ಅಸ್ತಿ ವಿಚಾರ ಕೊಲೆಯ ನಿಖರ ಕಾರಣ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಪ್ರಕರಣ | 13ನೇ ಪಾಯಿಂಟ್ ಶೋಧ ಕಾರ್ಯ ಬುಧವಾರವೂ ಮುಂದುವರಿಕೆ
ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಘಟನೆ ಹುಕ್ಕೇರಿ ಇತಿಹಾಸದಲ್ಲೇ ಅತ್ಯಂತ ಬೆಚ್ಚಿಬೀಳಿಸುವ ಕೊಲೆ ಎಂದು ಸ್ಥಳೀಯರು ಹೇಳಿದ್ದಾರೆ. ತನಿಖೆ ಮುಂದುವರೆದಿದ್ದು, ಆರೋಪಿಗಳಿಂದ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆ ಇದೆ.