- ‘ಕಾಂಗ್ರೆಸ್ ಆದ್ಯತೆಗಳೇನು ಎಂಬುದು ಸಮಾಜಕ್ಕೆ ಗೊತ್ತಾಗುತ್ತದೆ’
- ‘ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಭಯೋತ್ಪಾದಕ ಘಟನೆ’
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗಳಲ್ಲಿ ಬಂಧಿತರಾಗಿರುವ ‘ಅಮಾಯಕ’ರನ್ನು ಬಿಡುಗಡೆಗೊಳಿಸಲು ಉಪಸಮಿತಿ ರಚಿಸಿ ಅವರನ್ನು ಬಂಧ ಮುಕ್ತ ಮಾಡುವ ಉತ್ಸಾಹ, ಉತ್ಸುಕತೆ, ಉಮೇದು ಬಾಂಗ್ಲಾ ನುಸುಳುಕೋರರನ್ನು ಹತ್ತಿಕ್ಕಲು ತೋರದೆ ಇರುವುದು ಇವರ ಆದ್ಯತೆಗಳೇನು ಎಂದು ಸಮಾಜಕ್ಕೆ ಗೊತ್ತಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಭಯೋತ್ಪಾದಕ ಘಟನೆ ಎಂದು ಮಾನ್ಯ ಉಚ್ಚ ನ್ಯಾಯಾಲಯವೇ ಹೇಳಿರುವಾಗ, ಸರ್ಕಾರ ರಾಜ್ಯದ ಆಂತರಿಕ ಭದ್ರತೆ, ನುಸುಳುಕೋರರ ಪತ್ತೆ, ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು, ಬ್ಯಾಂಕ್ ಅವ್ಯವಹಾರಗಳ ತನಿಖೆಗಳನ್ನು ಚುರುಕು ಮಾಡುವ ಬದಲಾಗಿ ದೇಶ ವಿರೋಧಿಗಳ ಪರವಾಗಿ ನಿಂತಿದೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಧಿಕೃತ ಶಾಲೆಗಳಿಗೆ ಬೀಗಮುದ್ರೆ ಶಿಕ್ಷೆ; ಭ್ರಷ್ಟ ಅಧಿಕಾರಿಗಳಿಗೆ ಯಾಕೆ ರಕ್ಷೆ?
“ಸಚಿವ ಸಂಪುಟದಲ್ಲೂ ಇದನ್ನು ಅನುಮೋದಿಸಿಕೊಂಡು ದೇಶದ್ರೋಹಿಗಳ ಭದ್ರತೆಗೆ ನಿಲ್ಲುತ್ತಿರುವುದು ಅಧಿಕಾರದ ದುರುಪಯೋಗ, ಅಲ್ಪಸಂಖ್ಯಾತರ ಓಲೈಕೆ ಹಾಗೂ ರಾಜ್ಯದ ಜನರಿಗೆ ಬಗೆದ ಅನ್ಯಾಯ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಅಮಾಯಕರೇ? ಕಲ್ಲು ಹೊಡೆದು ಹಿಂದೂಗಳ ಮನೆ ಜಖಂ ಮಾಡಿದವರು ಅಮಾಯಕರೇ? ಅಂದಿನ ಕಾಂಗ್ರೆಸ್ ಶಾಸಕರಾದ ದಲಿತ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದವರು ಅಮಾಯಕರೇ? ಡಿಸಿಪಿ ಕಾರ್ ಧ್ವಂಸ ಮಾಡಿದವರು ಅಮಾಯಕರೇ? ಪೋಲೀಸರ ಮೇಲೆ ದಾಳಿ ಮಾಡಿದವ್ರು ಅಮಾಯಾಕರೇ?”ಎಂದು ಲೇವಡಿ ಮಾಡಿದ್ದಾರೆ.