ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ದೇವಸ್ಥಾನದ ಆವರಣಕ್ಕೆ ಇತ್ತೀಚಿನ ಮಳೆಯಿಂದ ನೀರು ನುಗ್ಗಿ, ಹುಂಡಿಯಲ್ಲಿದ್ದ ಕಾಣಿಕೆ ಹಣ ಸಂಪೂರ್ಣವಾಗಿ ಒದ್ದೆಯಾದ ಘಟನೆ ನಡೆದಿದೆ.
ಮಂಗಳವಾರ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಬೈಲಹೊಂಗಲ ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ, ಸವದತ್ತಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಮ್ಮುಖದಲ್ಲಿ ಹುಂಡಿ ಒಡೆದು, ನೋಟುಗಳನ್ನು ದೇವಸ್ಥಾನದ ಪ್ರಾಂಗಣದಲ್ಲಿ ಹರಡಿ ಒಣಗಿಸಲಾಯಿತು.
ನೋಟುಗಳೆಲ್ಲವೂ ಕುಂಕುಮ ಮತ್ತು ಭಂಡಾರಮಯವಾಗಿವೆ, ಸಿಬ್ಬಂದಿ ಅವುಗಳನ್ನು ಎಚ್ಚರಿಕೆಯಿಂದ ಬೇರ್ಪಡಿಸಿ ಒಣಗಿಸುವ ಕಾರ್ಯ ನಡೆಸಿದರು.