ಯುವತಿಯ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 3.15 ಲಕ್ಷ ದಂಡ ವಿಧಿಸಿ ಸಿಂಧನೂರು ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಮಹ್ಮದ್ ಚಾಂದಪಾಶ ಶಿಕ್ಷೆಗೊಳಗಾದ ಆರೋಪಿ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬಾಗೋಡಿ ಗ್ರಾಮದ ನಿವಾಸಿ ಎನ್ನಲಾಗಿದೆ.
ತನಿಖಾಧಿಕಾರಿಗಳಾದ ಸಿಪಿಐ ನಿಂಗಪ್ಪ ಹಾಗೂ ಗುರುರಾಜ್ ಆರ್ ಕಟ್ಟಿಮನಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸಿಂಧನೂರು ಪೀಠಾಸೀನ ನ್ಯಾಯಾಧೀಶರಾದ ಬಿ.ಬಿ ಜಕಾತಿ ಅವರು ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಲಾರಿ-ಕಾರ್ ಮುಖಾಮುಖಿ ಡಿಕ್ಕಿ; ಓರ್ವ ಸಾವು
ಘಟನೆ ವಿವರ : ಯುವತಿಯು ಸಿಂಧನೂರು ನಗರದ ಬಸ್ ನಿಲ್ದಾಣದಲ್ಲಿ 2021 ಜುಲೈ 21 ರಂದು ಬಸ್ ಗಾಗಿ ಕಾಯುತ್ತಿದ್ದರು, ಆಗ ಮಹ್ಮದ ಚಾಂದಪಾಶ ಒತ್ತಾಯಪೂರ್ವಕವಾಗಿ ಅರೆಪ್ರಜ್ಞೆ ತಪ್ಪಿಸಿ ಬಸ್ ನಲ್ಲಿ ಗೋವಾಕ್ಕೆ ಕೆರೆದುಕೊಂಡು ಹೋಗಿದ್ದ. ಅಲ್ಲಿ ಒಂದು ರೂಮ್ ನಲ್ಲಿ ಮದ್ಯಪಾನ ಮಾಡಿಸಿ ಅತ್ಯಾಚಾರ ಮಾಡಿದ್ದಾನೆ ಹಾಗೂ ಬೆದರಿಕೆ ಹಾಕಿ 9 ಲಕ್ಷ ನೀಡುವಂತೆ ಒತ್ತಾಯಿಸಿದ್ದ ಎಂದು ಯುವತಿ ಸಿಂಧನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದರು.