ಆಲಮಟ್ಟಿ ಜಲಾಶಯದ ಒಳಹರಿವು ಕಡಿಮೆಯಾಗಿದೆ. ಒಂದು ವಾರದಿಂದ ಜಲಾಶಯದ ಹೊರಹರಿವು ಕಡಿಮೆ ಮಾಡಿದ್ದರಿಂದ ಜಲಾಶಯ ಬಹುತೇಕ ಆಗಸ್ಟ್ 15ರ ವೇಳೆಗೆ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಗಸ್ಟ್ ನಲ್ಲಿಯೂ ಪ್ರವಾಹ ಸ್ಥಿತಿ ಇದ್ದು, ಒಳಹರಿವು ಏರುಮುಖವಾಗಿದ್ದರೆ ಜಲಾಶಯ ಭರ್ತಿ ಮಾಡುವುದಿಲ್ಲ. ಸದ್ಯಕ್ಕೆ ಒಳಹರಿವು ಕೂಡ ಕಡಿಮೆ ಇದ್ದು, ಪ್ರವಾಹದ ಸ್ಥಿತಿಯಿಲ್ಲ. ಹೀಗಾಗಿ ಆಗಸ್ಟ್ 15ಕ್ಕೆ ಜಲಾಶಯದ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹೊರಹರಿವು ಸ್ಥಗಿತಗೊಳಿಸಿದ್ದರೆ, ಜೂನ್ ಅಂತ್ಯಕ್ಕೆ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ, ಕೇಂದ್ರ ಜಲ ಆಯೋಗದ ಮಾರ್ಗದರ್ಶನದನ್ವಯ ಜಲಾಶಯವನ್ನು ಕೆಲ ಮಾನದಂಡ ಅನುಸರಿಸಿ ಭರ್ತಿ ಮಾಡಲಾಗುತ್ತದೆ. ಈ ವರ್ಷ ಮುಂಗಾರು ಮಳೆ ಉತ್ತಮವಾಗಿದೆ ಎಂಬ ಹವಮಾನ ವರದಿ, ಇದೇ ಮೊದಲ ಬಾರಿ ಮೇ 19 ರಂದೇ ಅತಿ ಬೇಗನೆ ಜಲಾಶಯದ ಒಳಹರಿವು ಆರಂಭಗೊಂಡಿದ್ದರಿಂದ ಜಲಾಶಯ ಅರ್ಧ ಬರ್ತಿಯಾಗುವ ಮುನ್ನವೇ ಅಂದರೆ ಮೇ 30ರಂದೆ ಜಲಾಶಯದಿಂದ ನೀರು ಬಿಡಲು ಆರಂಭಿಸಲಾಗಿದೆ.
ಇದರಿಂದಾಗಿ ಜಲಾಶಯಕ್ಕೆ 1.20 ಲಕ್ಷ ಕ್ಯೂಸೆಕ್ಸ್ ಅಧಿಕ ಒಳಹರಿವು ಬಂದು, 1.40 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಇದರಿಂದಾಗಿ ಜಲಾಶಯದ ಮುಂಭಾಗದಲ್ಲಿ ಯಾವುದೇ ಪ್ರವಾಹ ಸ್ಥಿತಿ ಉಂಟಾಗಲಿಲ್ಲ. ಕೆ ಬಿ ಜೆ ಎನ್ ಎಲ್ ಅಧಿಕಾರಿಗಳು ಈ ಬಾರಿ ಮುಂಜಾಗ್ರತೆ ಕ್ರಮ ಅನುಸರಿಸುವುದರಿಂದ ಈ ಬಾರಿ ಜಲಾಶಯದ ಹಿಂಭಾಗ ಹಾಗೂ ಮುಂಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗುವುದು ಮತ್ತಿತರ ಯಾವುದೇ ಅನಾಹುತಗಳು ಸಂಭವಿಸಲಿಲ್ಲ.
ಇದನ್ನೂ ಓದಿ: ವಿಜಯಪುರ | ಶಿಥಿಲಗೊಂಡಿರುವ ಬಂಗಾರ ಗುಂಡಿಯ ಸರ್ಕಾರಿ ಶಾಲೆ: ಜೀವ ಭಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು!
519.60 ಮೀಟರ್ ಗರಿಷ್ಠ ಎತ್ತರದ ಜಲಾಶಯದಲ್ಲಿ, 519.52 ಮೀಟರ್ ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 32 ಪಾಯಿಂಟ್ 395 ಕ್ಯೂಸೆಕ್ ಒಳಹರಿವು ಇದ್ದು, 30.370 ಕ್ಯೂಸೆಕ್ ನೀರನ್ನು ನದಿ ಪಾತ್ರದಿಂದ ಹರಿ ಬಿಡಲಾಗುತ್ತಿದೆ. 123. 081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 121.606 ಟಿಎಂಸಿ ಅಡಿ ನೀರು ಮಾತ್ರ ಬಾಕಿ ಇದೆ. ಅಧಿಕಾರಿಗಳ ಮುಂಜಾಗ್ರತ ಕ್ರಮ ಹಾಗೂ ಜಲ ಆಯೋಗದ ಮಾರ್ಗದರ್ಶನದಿಂದ ಜಲಾಶಯದ ಹತ್ತಿರವಿರುವ ಜಮೀನುಗಳಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.