ಶಿವಮೊಗ್ಗ, ರಿಲಯನ್ಸ್ ಸಂಸ್ಥೆಯ ಸಹ ಬಾಗಿತ್ವದಲ್ಲಿರುವ ಕ್ಯಾಂಪಾ ಕೋಲ ಕುಡಿಯುವ ನೀರಿನ ಬಾಟಲಿಯ ಮೇಲೆ ಪ್ಲಾಸ್ಟಿಕ್‌ನಲ್ಲಿ ರಾಷ್ಟ್ರಧ್ವಜದಂತೆ ಕಾಣುವ ಚಿತ್ರವನ್ನು ಮುದ್ರಿಸಿ, ಸಗಟು ಮಾರಟ ಹಾಗೂ ಚಿಲ್ಲರೇ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಕರವೇ ಸ್ವಾಭಿಮಾನಿ ಬಣ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮುಂದುವರೆದು ಮಾತನಾಡಿದ ಜಿಲ್ಲಾಧ್ಯಕ್ಷ ಕಿರಣ್, ಕೆಲವೊಂದು ಆಹಾರ ಪದಾರ್ಥದ ಚೀಲದ ಮೇಲೂ ಸಹ ರಾಷ್ಟ್ರಧ್ವಜವನ್ನು ಹೋಲುವ ಚಿಹ್ನೆ ಸಹ ಮುದ್ರಿತವಾಗಿರುತ್ತದೆ.
ಈ ಬಾಟಲಿಯು ಜನರು ಕುಡಿದ ಮೇಲೆ ಎಲ್ಲಿಂದಲ್ಲಿ ಎಸೆಯುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅಲ್ಲದೇ ಆ ಬಾಟಲಿಯನ್ನು ಎಲ್ಲರೂ ತುಳಿದುಕೊಂಡು ಓಡಾಡುವ ಸಂದರ್ಭ ಇರುತ್ತದೆ. ಈ ಬಾಟಲಿಯ ಮೇಲೆ ನಮ್ಮ ದೇಶದ ರಾಷ್ಟ್ರಧ್ವಜ ಹೋಲುವ ಚಿತ್ರವನ್ನು ಮುದ್ರಿಸುವುದರಿಂದ ಅದನ್ನು ತುಳಿಯುವುದು ಎಸೆಯುವುದು ಅಗೌರವ ತೋರಿದಂತಾಗುತ್ತದೆ ಎಂದು ಅಕ್ಷಪಿಸಿದ್ದಾರೆ.
ನಾಳೆ ಸ್ವಾತಂತ್ರ್ಯ ದಿನಾಚರಣೆ ಅಂಗಾವಾಗಿ ಧ್ವಜಾರೋಹಣಕ್ಕೆ ಸಾವಿರಾರು ಸಂಖ್ಯೆ ಜನರು ಸೇರುವುದರಿಂದ ಎಲ್ಲೆಂದರಲ್ಲಿ ನೀರಿನ ಬಾಟಲಿಗಳು ಎಸೆಯುವ ಸಾಧ್ಯತೆ ಹೆಚ್ಚಿದ್ದು, ಆದ್ದರಿಂದ ಧ್ವಜದ ರೀತಿ ಕಾಣುವ ಚಿಹ್ನೆಗೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತಾಗುತ್ತದೆ.
ಹಾಗಾಗಿ ಆ ಬಾಟಲಿಯ ಮೇಲೆ ಇರುವ ಚಿತ್ರವನ್ನು ನಿಷೇಧಿಸುವಂತೆ ಈ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ದೂರು ನೀಡುತ್ತಿದ್ದೇವೆ ಎಂದು ಮನವಿ ಮಾಡಿದ್ದಾರೆ.