ರಾಜ್ಯ ಸರ್ಕಾರವು ಆಗಸ್ಟ್ 16ರ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಲೇಬೇಕು. ಈ ಬಗ್ಗೆ ಎಲ್ಲ ಶಾಸಕರು ಹಾಗೂ ಸಚಿವ ಸಂಪುಟದ ಎಲ್ಲರೂ ಸಹಕಾರ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, “ಒಳಮೀಸಲಾತಿ ಜಾರಿಯನ್ನು ಯಾವುದೇ ಕಾನೂನು ಕಗ್ಗಂಟು ಉಂಟಾಗದಂತೆ ಜಾರಿ ಆದೇಶ ಮಾಡಿಸುವ ಬಗ್ಗೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ನಿರಂತರವಾಗಿ ಹೋರಾಟ, ಕ್ರಾಂತಿಕಾರಿ ಪಾದಯಾತ್ರೆ, ಕ್ರಾಂತಿಕಾರಿ ರಥಯಾತ್ರೆ, ಕ್ರಾಂತಿಕಾರಿ ರಥಯಾತ್ರೆ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಂಡು ಬರುತ್ತಿರುವ ಕರ್ನಾಟಕದ ಸಮಸ್ತ ಒಳಮೀಸಲಾತಿ ಹೋರಾಟಗಾರರು ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆ ನಡೆಸಿ, ನಾಗಮೋಹನ್ ದಾಸ್ ಅವರ ವರದಿ ಜಾರಿಗೆ ಸಂಬಂಧಿಸಿದಂತೆ ಹಿರಿಯ ವಕೀಲರು, ನಿವೃತ್ತ ಅಧಿಕಾರಿಗಳು ಮತ್ತು ರಾಜ್ಯದ ವಿವಿಧ ಸಂಘಟನೆಗಳ ಹೋರಾಟಗಾರರ ಮಧ್ಯ ಗಂಭೀರ ಚರ್ಚೆಗಳು ನಡೆದವು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಿವಿಧ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
“ಅಗಸ್ಟ್ 16ರ ಕ್ಯಾಬಿನೆಟ್ಟಿನಲ್ಲೇ ಒಳಮೀಸಲಾತಿ ಜಾರಿಯ ಘೋಷಣೆಯಾಗಬೇಕು. ಯಾವುದೇ ಉಪಸಮಿತಿ ರಚಿಸಿ, ಒಳಮೀಸಲಾತಿ ಜಾರಿಯನ್ನು ಮತ್ತಷ್ಟು ಕಾಲ ಮುಂದೂಡಿ, ಈಗಾಗಲೇ ವಯೋಮಿತಿ ಮೀರುತ್ತಿರುವ ಯುವಕರ ಭವಿಷ್ಯವನ್ನು ಹಾಳುಮಾಡಬಾರದು. ಒಳಮೀಸಲಾತಿ ಜಾರಿಗೆ ಎಲ್ಲ ಸಚಿವರು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಬೇಕು” ಎಂದು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಒತ್ತಾಯಿಸಿದ್ದಾರೆ.
https://shorturl.fm/61thI