ತಿಪಟೂರು | ಜನ ಸ್ವಾತಂತ್ರ್ಯೋತ್ಸವ : ಶ್ರಮಿಕ ಸೇನಾನಿಗಳಿಗೆ ಗೌರವ ಸಮರ್ಪಣೆ

Date:

Advertisements

ಜನಸ್ಪಂದನಾ ಟ್ರಸ್ಟ್ ತಿಪಟೂರು, ಹಾಗೂ ಸಂವಿಧಾನ ಸಂರಕ್ಷಣಾ ಪಡೆ, ಸಹಯೋಗದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದ ಅಂಗವಾಗಿ ತಿಪಟೂರು ಗಾಂಧೀನಗರ ಪೋಲೀಸ್ ಚೌಕಿ ಸರ್ಕಲ್ ನಲ್ಲಿ ‘ಜನ ಸ್ವತಂತ್ರ್ಯೋತ್ಸವ’ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಜನಸ್ಪಂದನ ಟ್ರಸ್ಟ್ ಆಧ್ಯಕ್ಷ ಟೂಡ ಶಶಿಧರ್ ತಿಳಿಸಿದರು

ತಿಪಟೂರು ನಗರದ ಜನಸ್ಪಂದನಾ ಟ್ರಸ್ಟ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ದಿನವನ್ನು ಜನಸಂಭ್ರಮದ ಹಬ್ಬವಾಗಿಸುವ ಉದ್ದೇಶದಿಂದ ‘ಜನ ಸ್ವಾತಂತ್ರ್ಯೋತ್ಸವ’ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದೆ. ಸಂವಿಧಾನ ಸಂರಕ್ಷಣಾ ಪಡೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸ್ವಾತಂತ್ರ್ಯ ದಿನದ ಅಂಗವಾಗಿ ತಿಪಟೂರು ನಗರದ ಕೋಡಿ ಸರ್ಕಲ್ ನಿಂದ ಜಾಥ ಆರಂಭವಾಗಿ ದೊಡ್ಡಪೇಟೆ, ಬಿ.ಹೆಚ್ ರಸ್ತೆ ಮೂಲಕ ನಗರಸಭೆ ವೃತ್ತ, ರೈಲ್ವೆ ಸ್ಟೇಷನ್ ರಸ್ತೆ, ಕಾರೋನೇಷನ್ ರಸ್ತೆ ಮೂಲಕ ಸಾಗಿ ಗಾಂಧೀನಗರ ಪೋಲೀಸ್ ಚೌಕಿ ಸರ್ಕಲ್ ತಲುಪಲಿದೆ ಎಂದು ಹೇಳಿದರು.

ತಿಪಟೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ತಮ್ಮ ವೃತ್ತಿಯ ಮೂಲಕವೇ ಸೇವೆ ಸಲ್ಲಿಸಿ, ದೇಶದ ಪ್ರಗತಿಗೂ ನೆರವಾಗಿರುವ ಶ್ರಮಿಕ ವರ್ಗದವರನ್ನು ಜನ ಸ್ವಾತಂತ್ರ್ಯ ಸಂಭ್ರಮದಲ್ಲಿ ಅವರ ಸೇವೆಯನ್ನು ಗೌರವಿಸಿ ಅವರ ವೃತ್ತಿ ಧರ್ಮಕ್ಕೆ ನಮಿಸುವ ಉದ್ದೇಶದಿಂದ ಸೈಕಲ್ ರಿಪೇರಿ ಮಾಡುತ್ತಾ ಬಂದಿರುವ ದಮೋಜಿರಾವ್, ಟ್ರಾ ಕ್ಟರ್ ಮೆಕ್ಯಾನಿಕ್ ಕೆಲಸ ಮಾಡುತ್ತಿರುವ
ವಿನ್ ಸೆಂಟ್ ಡಿಸಿಲ್ವ, ತಿಪಟೂರಿನ ಗಣಪತಿ ಪೆಂಡಾಲ್ ನಲ್ಲಿ ವಾದ್ಯ ಮಾಡುತ್ತ ಬಂದಿರುವ ನರಸಿಂಹಯ್ಯ, ಬೋರ್ ವೆಲ್ ಕೆಲಸ ಮಾಡುವ ಅರುಮುಗಂ, ದಾದಿ(ನರ್ಸ್) ಕೆಲಸದ ಮೂಲಕ ಉತ್ತಮ ಸೇವೆ ಸಲ್ಲಿಸಿರುವ
ಸಿಸಿಲಿಯಾ ಡಿಸೋಜ, ಹಾಸಿಗೆ ಹೊಲಿಯುವ ಕಾಯಕದಲ್ಲಿ ತೊಡಗಿಸಿಕೊಂಡಿರುವ
ಬಷೀರ್ ಖಾನ್, ಸಿಹಿ, ಖಾರ ಪದಾರ್ಥ ಮಾಡುವ ಮೂಲಕ ತಿಪಟೂರಿಗೆ ಪ್ರಸಿದ್ದಿ ತಂದಿರುವ ಕಿಟಕಿ ಖಾರ
ಕೆ. ಷಣ್ಮುಗಪ್ಪ, ಚಾಲಕ ವೃತ್ತಿ ಮಾಡುತ್ತಿರುವ
ಕೆ. ಝಕೀರ್ ಅಹಮದ್, ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ರಾಜಣ್ಣ, ನಿವೃತ್ತ ಶಿಕ್ಷಕರಾದ
ಗೌಸ್ ಮೊಯಿಮುದ್ದೀನ್ ಸೇರಿದಂತೆ
ರಾಜಕೀಯ ಸೇವೆ ಸಲ್ಲಿಸಿರುವ ಮಾಜಿ ನಗರ ಸಭೆ ಅಧ್ಯಕ್ಷರಾದ ಎಸ್ ಎ ಅಣ್ಣಯ್ಯ ಅವರನ್ನು ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು

Advertisements

ಜನ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಶ್ರಮಿಕ ಸೇನಾನಿಗಳನ್ನು ಸನ್ಮಾನಿಸಲಾಗುವುದು. ತಿಪಟೂರು ಜಮೀರ್ ಮತ್ತು ತಂಡದಿಂದ ಗೀತಾ ಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಸ್ವಾತಂತ್ರ್ಯ ಚಳವಳಿ, ಜನಚಳವಳಿಯಾಗಿ ರೂಪುಗೊಂಡು,ಹಲವಾರು ಮಹನೀಯರ ಶ್ರಮದಿಂದ ಸ್ವಾತಂತ್ರ್ಯ ದೊರೆತಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಸಾಧನೆ ಮುಂದಿನ ಪೀಳಿಗೆಗೆ ತಿಳಿಯಬೇಕು. ಸ್ವಾತಂತ್ರ್ಯದಿನ ಪ್ರತಿ ಮನೆ,ಮನಗಳಲ್ಲಿ ಹಬ್ಬದಂತೆ ಆಚರಿಸಬೇಕು ಎಂದು ತಿಳಿಸಿದರು.

ಸಂವಿಧಾನ ಸಂರಕ್ಷಣಾಪಡೆ ಅಧ್ಯಕ್ಷ ಲೋಕೇಶ್ ಮಾತನಾಡಿ 79ನೇ ಸ್ವಾತಂತ್ರ್ಯದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ದೃಷ್ಠಿಯಿಂದ ಎಲ್ಲಾ ಜನಾಂಗದ ಜನರು ಸೇರಿ ಹಬ್ಬವಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಲವಾರು ಸಂಘಸಂಸ್ಥೆಗಳು ಭಾಗವಹಿಸುತ್ತಿವೆ ಎಂದು ತಿಳಿಸಿದರು

ಮಾಧ್ಯಮಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ತಿಮ್ಲಾಪುರ ದೇವರಾಜು, ಸಾದತ್,ತಿಪಟೂರು ಸೌಹಾರ್ದ ವೇದಿಕೆ ಅಧ್ಯಕ್ಷ ಅಲ್ಲಾಭಕ್ಷು, ಬೆಳೆಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ, ಮೋಹನ್ ಸಿಂಘಿ ಮುಂತಾದವರು ಉಪಸ್ಥಿತರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X