ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಸಹಯೋಗದಲ್ಲಿ 79ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ʼನಮ್ಮ ಸಂಸ್ಕೃತಿ ನಮ್ಮ ಹೆಮ್ಮೆʼ ನಾಮದಡಿ ಕೈಮಗ್ಗ, ಕಸೂತಿ, ಚಿತ್ರಕಲೆಗಳ ವಸ್ತು ಪ್ರದರ್ಶನವನ್ನು ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಆಯೋಜಿಸಲಾಗಿದೆ.
ವಸ್ತು ಪ್ರದರ್ಶನದಲ್ಲಿ ರಾಜ್ಯದಲ್ಲಿ ಉತ್ಪತ್ತಿಯಾಗುವ 30ಕ್ಕೂ ಹೆಚ್ಚು ಕೈಮಗ್ಗ ಉತ್ಪನ್ನಗಳು, ಗುಡಿ ಕೈಗಾರಿಕೆಯ ವಿವಿಧ ರೀತಿಯ ಕಲಾ ಕೃತಿಗಳು, ಕಲಘಟಗಿಯ ತೊಟ್ಟಿಲು, ಹಳೆಯ ನಾಣ್ಯಗಳ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಗುಡಿ ಕೈಗಾರಿಕೆಯ ಕಲಾಕೃತಿ, ಸ್ವಸಹಾಯ ಗುಂಪುಗಳ ಅಕ್ಕ ಪೇಡಾ, ನಾಡಿನ ಸ್ವಾತಂತ್ರ್ಯದ ಇತಿಹಾಸ ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ವಸ್ತು ಪ್ರದರ್ಶನ ಮೇಳದಲ್ಲಿ ಬಿದರಿನ ಕಲಾಕೃತಿಗಳು, ಮಣ್ಣಿನ ಕಲಾಕೃತಿಗಳು, ಸ್ಥಳದಲ್ಲಿಯೇ ಮಣ್ಣಿನ ಕಲಾಕೃತಿಗಳನ್ನು ನಿರ್ಮಿಸುವುದು ಹಾಗೂ ನವಲಗುಂದ ದರಿ ಮತ್ತು ಗುಡಾರ ಪಟ್ಟಿ, ಜಮಖಾನಾ ವಸ್ತು ಪ್ರದರ್ಶನದಲ್ಲಿ ಲಭ್ಯವಿರುತ್ತವೆ.
ಇದನ್ನೂ ಓದಿ: ಧಾರವಾಡ | ಗಣಿತ ವಿಷಯ ಬೋಧಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕರ್ನಾಟಕದಲ್ಲಿ ಜಿಐಟಿ ಟ್ಯಾಗ್ ಇರುವ ಎಲ್ಲ ವಸ್ತುಗಳು ಪ್ರದರ್ಶನದಲ್ಲಿ ಕಾಣಲಿವೆ.