ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳು ಮತ್ತು ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಅದನ್ನು ಉಳಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕಾರಾಗೃಹ ಅಧೀಕ್ಷಕಿ ಅನಿತಾ ಹಿರೇಮನಿ ಹೇಳಿದರು.
ನಗರದ ಕಾರಾಗೃಹದಲ್ಲಿ 79ನೆಯ ಧ್ವಜಾರೋಹಣ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ವಿಚಾರಣಾಧೀನ ಬಂಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರಾಗೃಹದಲ್ಲಿ ಇದ್ದಷ್ಟು ದಿನ ಸದ್ಗುಣಗಳನ್ನು ಬೆಳೆಸಿಕೊಂಡು, ಬಿಡುಗಡೆ ಹೊಂದಿದ ನಂತರ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ಅವರು ಬಂಧಿಗಳಿಗೆ ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅತ್ಯಾಚಾರ ಪ್ರಕರಣ : ಅಪರಾಧಿಗೆ ಜೀವಾವಧಿ ಶಿಕ್ಷೆ
ಈ ಸಂದರ್ಭದಲ್ಲಿ ಕಾರಾಗೃಹದ ಜೈಲರಗಳಾದ, ಈರಯ್ಯ ಹಿರೇಮಠ, ಟಿ.ಕೆ ಪುಂಡಲೀಕ, ವೆಂಕಟೇಶ್ ಹಾಗೂ ಸಹಾಯಕ ಜೈಲರಗಳಾದ ರಾಜಕುಮಾರ ದೊಡ್ಡಮನಿ, ಸಾವಿತ್ರಿ, ಜಗದೀಶ್ ಗಸ್ತಿ ,ಶಿಕ್ಷಕ ತಾಯಪ್ಪ, ಮುತ್ತುರಾಜ್, ಜಾವೀದ್ ಮುಂತಾದವರು ವೇದಿಕೆಯ ಮೇಲಿದ್ದರು.
