‘ಪಾಕಿಸ್ತಾನ ಅಥವಾ ಭಾರತದ ವಿಭಜನೆ’ (Pakistan or Partition of India) ಬಾಬಾಸಾಹೇಬ್ ಡಾ. ಅಂಬೇಡ್ಕರ್ ಬರೆದಿರುವ ಅತ್ಯಂತ ಮಹತ್ವದ ಪುಸ್ತಕಗಳಲ್ಲಿ ಒಂದು. ಇದರಲ್ಲಿ ಬಹುವಿವಾದಿತ ಭಾರತದ ವಿಭಜನೆಯ ಕುರಿತಾಗಿ ಅಂಬೇಡ್ಕರ್ ಅವರು ಅಧ್ಯಯನ ಪೂರ್ಣವಾಗಿ ಮಂಡಿಸಿದ ವಿಚಾರಗಳಿವೆ. ಜತೆಗೆ ಆ ಕಾಲದ ಸಾಮಾಜಿಕ ಮತ್ತು ಮತೀಯ ಸಂಬಂಧಗಳ ಕುರಿತಾದ ಸೂಕ್ಷ್ಮ ವಿಶ್ಲೇಷಣೆ ಇದೆ. ಮೂಲತಃ ಈ ಪುಸ್ತಕ ಒಂದು ವರದಿಯ ರೂಪದಲ್ಲಿತ್ತು. ಮುಸ್ಲಿಂ ಲೀಗ್ 1940ರ ತನ್ನ ಲಾಹೋರ್ ಗೊತ್ತುವಳಿಯಲ್ಲಿ ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ಆಗಲೇಬೇಕು…

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ