1947 – ಅಂದು ಭಾರತವು ಸ್ವಾತಂತ್ರ್ಯ ಗಳಿಸಿತು; ಇಂದು ಜಾತ್ಯತೀತ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದೆ!

Date:

Advertisements

ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಅವಿಸ್ಮರಣೀಯ ಕ್ಷಣವಾದ ಸ್ವಾತಂತ್ರ್ಯವು 78 ವರ್ಷಗಳ ಹಿಂದೆ 1947ರ ಆಗಸ್ಟ್‌ 15ರಂದು ದೊರೆಯಿತು. ಆದರೆ, ಅದೇ ದಿನ, ಭಾರತವನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಲಾಯಿತು. ಆದರೂ, ಸಂವಿಧಾನವು ಭಾರತವನ್ನು ಬಹುತ್ವವಾದಿ, ಜಾತ್ಯತೀತವಾದಿ ಗಣರಾಜ್ಯವೆಂದು ಕರೆಯಿತು. ದುರದೃಷ್ಟವಶಾತ್, ಇಂದು ಅನೇಕ ಭಾರತೀಯರು ಜಾತ್ಯತೀತತೆಯನ್ನು ಕೆಟ್ಟ ಪದವೆಂದು ಭಾವಿಸುತ್ತಿದ್ದಾರೆ. ಭಾರತವನ್ನು ಹಿಂದು ರಾಷ್ಟ್ರ ಮಾಡಬೇಕೆಂಬ ಕೋಮುವಾದಿ ಸಿದ್ಧಾಂತಕ್ಕೆ ಜೋತು ಬೀಳುತ್ತಿದ್ದಾರೆ. ಕೋಮುವಾದಿ ಶಕ್ತಿಗಳು ಇಂದು ಇಡೀ ದೇಶವನ್ನು ಆವರಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯೊಳಗೆ ಹಿಂದು ರಾಷ್ಟ್ರದ ನಿಲುವನ್ನು ಭಾರತೀಯರು ಪುನರ್ವಿಚಾರ ಮಾಡಬೇಕಿದೆ. ಧಾರ್ಮಿಕ ಸಹಿಷ್ಣುತೆ, ಸಮಾನತೆ ಹಾಗೂ ವೈವಿಧ್ಯಮಯ ನಂಬಿಕೆಗಳಿಗೆ ಗೌರವದಿಂದ ಕೂಡಿದ ನಮ್ಮ ವಿಶ್ವವಿಖ್ಯಾತ ಬಹುತ್ವದ ಪರಂಪರೆಯನ್ನು ಮರಳಿ ಬರೆಯಬೇಕಿದೆ.

ಭಾರತದಲ್ಲಿ ಜಾತ್ಯತೀತತೆಯು ಮರೆಯಾದರೆ ಭಾರತೀಯರು ಏನೆಲ್ಲ ಕಳೆದುಕೊಳ್ಳಬಹುದು… ಊಹಿಸಿದ್ದೇವೆಯೇ?

ಸುಮಾರು 4,000 ವರ್ಷಗಳ ಹಿಂದೆ, ನಮ್ಮ ವೈದಿಕ ಋಷಿಗಳು ʼʼಸತ್ಯವು ಒಂದೇ, ಜ್ಞಾನಿಗಳು ಅದನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆʼʼ ಎಂಬ ಆಲೋಚನೆಯನ್ನು ಹುಟ್ಟುಹಾಕಿದರು. ಈ ಸರಳ ಚಿಂತನೆಯು ನಮ್ಮ ಪೂರ್ವಜರಿಗೆ ಸಾವಿರಾರು ವರ್ಷಗಳವರೆಗೆ ಅಪೂರ್ವ ಪ್ರಗತಿ ಮತ್ತು ಸಮೃದ್ಧಿಯನ್ನು ತಂದಿತು. ಇದು ಎಲ್ಲ ರೀತಿಯ ನಂಬಿಕೆಗಳ ಜನರನ್ನು— ಪಂಥೀಯರು (ಹಿಂದುಗಳು), ನಾಸ್ತಿಕರು (ಚಾರ್ವಾಕರು), ಭೌತಿಕವಾದಿಗಳು (ಆಜೀವಿಕರು), ಆಧ್ಯಾತ್ಮಿಕವಾದಿಗಳು (ಜೈನರು)— ಒಟ್ಟಿಗೆ ಬದುಕಲು ಮತ್ತು ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಕ್ರಿ.ಪೂ. 3ನೇ ಶತಮಾನದಲ್ಲಿ ನಮ್ಮ ಸಮೃದ್ಧಿಯ ಉತ್ತುಂಗದಲ್ಲಿ, ಚಕ್ರವರ್ತಿ ಅಶೋಕನು ಬೌದ್ಧಧರ್ಮವನ್ನು ಅಳವಡಿಸಿಕೊಂಡರು. ಆಗ ಒಂದು ಆದೇಶವನ್ನು ಘೋಷಿಸಿದರು: ʼʼಒಬ್ಬರು ಇನ್ನೊಬ್ಬರ ಧರ್ಮವನ್ನು ಗೌರವಿಸಬೇಕು. ಇದರಿಂದ ಒಬ್ಬರ ಧರ್ಮವು ಬೆಳೆಯುತ್ತದೆ ಮತ್ತು ಇನ್ನೊಬ್ಬರ ಧರ್ಮಕ್ಕೆ ಸೇವೆ ಸಲ್ಲಿಸಲಾಗುತ್ತದೆʼʼ ಎಂದು ಅಶೋಕ ಹೇಳಿದ್ದರು. ಬೌದ್ಧಧರ್ಮವು ಈ ಭಾರತೀಯ ತತ್ವಶಾಸ್ತ್ರವನ್ನು ಏಷ್ಯಾದ ಬಹುತೇಕ ಭಾಗಗಳಿಗೆ ಮತ್ತು ಅಂತಿಮವಾಗಿ ಭೂಮಿಯ ಎಲ್ಲ ಖಂಡಗಳಿಗೆ ಕೊಂಡೊಯ್ಯಿತು. 1937ರಲ್ಲಿ, ಚೀನಾದ ರಾಜಕಾರಣಿ ಹು ಶಿ ಅವರು, ʼʼಸೈನಿಕರನ್ನು ಕಳುಹಿಸುವ ಬದಲು, ಭಾರತವು ಕೆಲವು ಮಿಷನರಿಗಳನ್ನು ಕಳುಹಿಸಿ ಚೀನಾವನ್ನು ಸಾಂಸ್ಕೃತಿಕವಾಗಿ ಗೆದ್ದಿತುʼʼ ಎಂದು ವಿಷಾದಿಸಿದ್ದರು.

Advertisements

8ನೇ ಶತಮಾನದಿಂದ ಮುಸ್ಲಿಂ ಆಡಳಿತಗಾರರ ಆಗಮನದ ಹೊರತಾಗಿಯೂ, ಈ ಬಹುತ್ವವಾದ ಸಂಪ್ರದಾಯಗಳು ಭಾರತದಲ್ಲಿ ಇದ್ದವು. ಕೆಲವು ಮುಸ್ಲಿಂ ಚಕ್ರವರ್ತಿಗಳು- ಔರಂಗಜೇಬನಂತಹವರು, ಇತರ ಧರ್ಮಗಳಿಗೆ ಕ್ರೂರವಾಗಿ ಕಾಣಿಸಿಕೊಂಡರು. ಆದರೆ, ಅಕ್ಬರನಂತಹ ರಾಜರು ಗೌರವಾನ್ವಿತರಾಗಿದ್ದರು. ಅಕ್ಬರ್ ವಿವಿಧ ಧರ್ಮಗಳ ಸದಸ್ಯರನ್ನು ತನ್ನ ಸಂಪುಟಕ್ಕೆ ನೇಮಿಸಿಕೊಂಡಿದ್ದರು.

18ನೇ ಶತಮಾನದಲ್ಲಿ ಬ್ರಿಟಿಷರು ಆಗಮಿಸಿದಾಗ, ಭಾರತವು ಹಿಂದುಗಳು ಮತ್ತು ಮುಸ್ಲಿಮರ ನಡುವಿನ ಬಲವಾದ ಸೌಹಾರ್ದ ಭಾವನೆಯನ್ನು ಒಳಗೊಂಡಿತ್ತು. 1857ರಲ್ಲಿ ಹಿಂದು-ಮುಸ್ಲಿಮರು ಬ್ರಿಟಿಷರ ವಿರುದ್ಧ ಒಟ್ಟಿಗೆ ದಂಗೆ ಎದ್ದರು. ಭಾರತದ ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಫರ್‌ನ ನಾಯಕತ್ವದಲ್ಲಿ ಸಾಂಕೇತಿಕವಾಗಿ ಒಂದಾಗಿದ್ದರು. ರಾಣಿ ಲಕ್ಷ್ಮೀಬಾಯಿ ಮತ್ತು ಬೇಗಮ್ ಹಜರತ್ ಮಹಲ್‌ನಂತಹ ಹಿಂದು ಮತ್ತು ಮುಸ್ಲಿಂ ಆಡಳಿತಗಾರರು ಬ್ರಿಟಿಷರ ವಿರುದ್ಧ ಒಟ್ಟಿಗೆ ಹೋರಾಡಿದರು.

ಭಾರತದ ಜಾತ್ಯತೀತ ಸಂಸ್ಕೃತಿಯು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿಯೂ ಮುಂದುವರೆದಿತ್ತು. 1916ರಲ್ಲಿ ಮೋತಿಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ- ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನ್ನು ಪ್ರತಿನಿಧಿಸುತ್ತಿದ್ದ ಹೊಂದಾಣಿಕೆಯು ಹಿಂದು-ಮುಸ್ಲಿಂ ಸಹಕಾರದ ಸಂಕೇತವಾಗಿ ಕಾಣಿಸಿತ್ತು. ಬ್ರಾಹ್ಮಣ ಮತ್ತು ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ಗೋಖಲೆ, ಜಿನ್ನಾರನ್ನು ‘ಹಿಂದು-ಮುಸ್ಲಿಂ ಐಕ್ಯತೆಯ ಅತ್ಯುತ್ತಮ ರಾಯಭಾರಿ’ ಎಂದು ಕರೆದರು. ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದಾಗ, ಧಾರ್ಮಿಕ ಸಾಮರಸ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ʼʼನನ್ನ ಹಿಂದು ಧರ್ಮವು ಜಾತಿಗೆ ಸೀಮಿತವಾಗಿಲ್ಲ. ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಹಾಗೂ ನನಗೆ ತಿಳಿದಿರುವ ಎಲ್ಲರನ್ನೂ ಒಳಗೊಂಡಿದೆʼʼ ಎಂದು ಅವರು ಹೇಳಿದ್ದರು.

ಆದರೆ, ಬ್ರಿಟಿಷರಿಗೆ ಕ್ಷಮೆ ಕೇಳಿ ಜೈಲಿನಿಂದ ಹೊರಬಂದ ಸಾವರ್ಕರ್, ಹಿಂದುತ್ವವಾದ ಮತ್ತು ಎರಡು ರಾಷ್ಟ್ರದ ಪರಿಕಲ್ಪನೆಯನ್ನು 1923ರಲ್ಲಿ ಮಂಡಿಸಿದರು. ಭಾರತದಲ್ಲಿ ಹಿಂದು-ಮುಸ್ಲಿಂ ನಡುವೆ ಕೋಮುದ್ವೇಷ ಬಿತ್ತಲು ಆರಂಭಿಸಿದರು. ಮುಂದುವರಿದು, ಭಾರತವು ಸ್ವಾತಂತ್ರ್ಯವನ್ನು ಗಳಿಸಿದಾಗ ಹಿಂದು-ಮುಸ್ಲಿಂ ಐತಿಹಾಸಿಕ ಬಾಂಧವ್ಯವು ದೊಡ್ಡ ಒತ್ತಡಕ್ಕೆ ಒಳಗಾಯಿತು. ಸ್ವಾತಂತ್ರ್ಯಕ್ಕೂ ಒಂದು ದಶಕದ ಹಿಂದೆ, 1937ರಲ್ಲಿ ಕಾಂಗ್ರೆಸ್ ಪಕ್ಷವು ರಚಿಸಿದ ಪ್ರಾಂತೀಯ ಸರ್ಕಾರಗಳಲ್ಲಿ ಯಾವುದೇ ಮುಸ್ಲಿಂ ಲೀಗ್ ನಾಯಕನಿಗೆ ಸ್ಥಾನ ನೀಡಲು ಜವಾಹರಲಾಲ್ ನೆಹರು ನಿರಾಕರಿಸಿದ್ದು, ಗಂಭೀರ ತಿರುವಿಗೆ ಕಾರಣವಾಯಿತು. ಆದರೆ, ನೆಹರು ಮುಸ್ಲಿಮರ ವಿರುದ್ಧವಾಗಿರಲಿಲ್ಲ. ಅಂತೆಯೇ ಅವರು ಸಾಮುದಾಯಿಕ ಪಕ್ಷದ ಪ್ರತಿನಿಧಿಗಳನ್ನು ಸರ್ಕಾರದಲ್ಲಿ ನೇಮಿಸಲು ಕೂಡ ಬಯಸಿರಲಿಲ್ಲ. ಆದರೆ, ಈ ಕಠಿಣ, ಏಕಪಕ್ಷೀಯ ನಿರ್ಧಾರವು ಜಿನ್ನಾರ ಆಕ್ರೋಶಕ್ಕೆ ಕಾರಣವಾಯಿತು. ಪ್ರತೀಕಾರಕ್ಕೆ ಪ್ರೇರೇಪಿಸಿತು. ಜಿನ್ನಾ ಅವರು ‘ಇಸ್ಲಾಂ ಅಪಾಯದಲ್ಲಿದೆ’ ಎಂದು ಕರೆ ಕೊಟ್ಟರು. ಸಾವರ್ಕರ್ ಪ್ರತಿಪಾದಿಸಿದ್ದ ಎರಡು ರಾಷ್ಟ್ರ ಪರಿಕಲ್ಪನೆಯಿಂದ ಪ್ರೇರೇಪಿತರಾದವರಂತೆ, ಪಾಕಿಸ್ತಾನ ಎಂಬ ಪ್ರತ್ಯೇಕ ರಾಷ್ಟ್ರಕ್ಕಾಗಿ ಮುಸ್ಲಿಮರನ್ನು ಒಗ್ಗೂಡಿಸಿದರು.

ವಿಭಜನೆಯು ಸ್ವತಂತ್ರ ಭಾರತದ ಎರಡು ದೊಡ್ಡ ಸಮುದಾಯಗಳ ನಡುವಿನ ಸಾಮರಸ್ಯ-ಸಹಬಾಳ್ವೆಗೆ ದೊಡ್ಡ ಆಘಾತವನ್ನು ಉಂಟುಮಾಡಿತು. 1990ರ ದಶಕದಲ್ಲಿ ಹಿಂದುತ್ವವು ಪ್ರಬಲವಾಗಿ ಮುಖ್ಯವಾಹಿನಿಗೆ ಬಂದಿತು. 1992ರಲ್ಲಿ ಬಾಬರಿ ಮಸೀದಿಯ ಧ್ವಂಸದೊಂದಿಗೆ ಹಿಂದುತ್ವ ಕ್ರೌರ್ಯದೊಂದಿಗೆ ವಿಸ್ತರಿಸಿತು. ಈಗ ಭಾರತದ ಪ್ರಬಲ ರಾಜಕೀಯ ಚಳವಳಿಯಾಗಿಯೇ ಬೆಳೆದುಹೋಗಿದೆ. ಇಂದು, ಅನೇಕ ಹಿಂದುಗಳು ಹಿಂದು ರಾಷ್ಟ್ರದ ರೂಪದಲ್ಲಿ ಹಿಂದು ಪ್ರಾಬಲ್ಯವನ್ನು ಸ್ಥಾಪಿಸಲು ಬಯಸುವ ಹಿಂದುತ್ವದೊಂದಿಗೆ ಒಗ್ಗೂಡುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: ‘ಶೋಲೆ’ @ 50: ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲ

ಹಿಂದುತ್ವದ ಅನುಯಾಯಿಗಳು ಮುಸ್ಲಿಂ ಅಲ್ಪಸಂಖ್ಯಾತರು ಭಾರತದ ಅಭಿವೃದ್ಧಿಗೆ ಬದ್ದರಾಗಿಲ್ಲ ಎಂಬ ಸುಳ್ಳು ನಿರೂಪಣೆಯನ್ನು ನಂಬಿಕೊಂಡಿದ್ದಾರೆ. ಈ ಭಾವನೆಯು ದಿನೇ ದಿನೇ ಗಟ್ಟಿಯಾಗುತ್ತಿದೆ. ದ್ವೇಷವಾಗಿ ಪರಿವರ್ತನೆಗೊಳ್ಳುತ್ತಿದೆ. ದ್ವೇಷದ ಭಾವನೆಯೊಂದಿಗೆ ಸಹಜ ಎಂಬಂತೆ ದಾಳಿ, ದೌರ್ಜನ್ಯ, ಕೊಲೆಗಳಲ್ಲಿ ಪ್ರತಿಫಲಿಸುತ್ತಿದೆ. ಇಂದು, ಭಾರತದ ಅನೇಕ ಮುಸ್ಲಿಮರು ಮತ್ತು ಹಿಂದುಗಳು ಪರಸ್ಪರರ ಮೇಲೆ ಭಯ ಮತ್ತು ದ್ವೇಷವನ್ನು ಹೊಂದಿದ್ದಾರೆ.

ಈಗಾಗಲೇ ಬಹಳಷ್ಟು ಕಾಲ ಮೀರಿಹೋಗಿದೆ. ಈಗಲೂ, ಭಾರತವು ತನ್ನ ಬಹುಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಳ್ಳಲು ಬಯಸಿದರೆ, ಧರ್ಮದ ಆಧಾರದ ಮೇಲಿನ ಈ ದ್ವೇಷವನ್ನು ಕೊನೆಗಾಣಿಸಬೇಕು. ಈಗ ಹಿಂದುತ್ವವು ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವುದರಿಂದ, ಯಾವುದೇ ರೀತಿಯ ಧಾರ್ಮಿಕ ತಾರತಮ್ಯ ಅಥವಾ ದಬ್ಬಾಳಿಕೆಯನ್ನು ಸಾಂವಿಧಾನಿಕವಾಗಿ ನಿಷೇಧಿಸಬೇಕು.

ಎಲ್ಲ ಧರ್ಮಗಳಿಂದ ರಾಜಕೀಯ/ಸರ್ಕಾರಗಳು ತತ್ವಾತ್ಮಕ ಅಂತರವನ್ನು ಕಾಪಾಡಿಕೊಂಡರೆ ಅಥವಾ ಎಲ್ಲವನ್ನೂ ಸಮಾನವಾಗಿ ಪ್ರೋತ್ಸಾಹಿದರೆ ಭಾರತದ ಜಾತ್ಯತೀತತೆ ಉಳಿಯಬಹುದು ಎಂದು ಅನೇಕ ಭಾರತೀಯ ಚಿಂತಕರು ಭಾವಿಸುತ್ತಾರೆ. ಅಂದರೆ, ಜಾತ್ಯತೀತತೆ ಉಳಿಸುವಲ್ಲಿ ರಾಜಕಾರಣಿಗಳಿಂದ ಹೆಚ್ಚಿನದ್ದನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ, ಅಸ್ಸಾಂನ ಮುಖ್ಯಮಂತ್ರಿ (ಹಿಂದೂತ್ವದ ಭಕ್ತ) ಹಿಮಂತ ಬಿಸ್ವಾ ಶರ್ಮಾ ಅವರು, ‘ಜಾತ್ಯತೀತರಾಗಿರುವುದು ಹೇಗೆ? ನಾನು ಕಟ್ಟಾಸ್ಸು ಹಿಂದು. ಅದೇ ರೀತಿ, ಮುಸ್ಲಿಂ ವ್ಯಕ್ತಿಯು ಜಾತ್ಯತೀತರಾಗಿರುವುದು ಹೇಗೆ? ಅವನು ಕಟ್ಟಾಸ್ಸು ಮುಸ್ಲಿಂ’ ಎಂದು ಹೇಳಿದ್ದರು.

ಮತ್ತೊಂದೆಡೆ, ಕಾಶ್ಮೀರದ ಮುಸ್ಲಿಂ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು, “ಭಾರತವು ಕಷ್ಟದ ಹಂತವನ್ನು ಮೀರಿ, ಮತ್ತಷ್ಟು ಸಂಕಷ್ಟಕ್ಕೆ ಒಡ್ಡಿಕೊಳ್ಳುತ್ತಿದೆ. ಆದರೆ ಯಾರೂ ಇದರ ಜಾತ್ಯತೀತತೆಯನ್ನು ನಾಶ ಮಾಡಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದರು. ಅಬ್ದುಲ್ಲಾ ಅವರ ಈ ಆಶಾವಾದ, ಆಶಯ ಎಲ್ಲ ಭಾರತೀಯದ್ದಾಗಬೇಕು. ಭಾರತವು ಜಾತ್ಯತೀತವಾದದ ಎಡೆಗೆ ಮರಳಬೇಕು ಎಂದು ಸ್ವಾತಂತ್ರ್ಯ ದಿನವಾದ ಇಂದು ಆಶಿಸೋಣ…

ಕೃಪೆ: ದಿ ವೈರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X