“ಕಳೆದ ಬುಧವಾರ ಸಚಿವನಾಗಿದ್ದೆ, ಇಂದು ಮಾಜಿ ಸಚಿವನಾಗಿದ್ದೇನೆ, ಆದರೆ ನನಗೆ ಯಾವುದೂ ಬದಲಾವಣೆಯ ಅನುಭವವಾಗಿಲ್ಲ. ನನ್ನ ಮೇಲೆ ಜನರ ಇಟ್ಟಿರುವ ವಿಶ್ವಾಸ ಹಾಗೂ ಪ್ರೀತಿಯನ್ನು ನೋಡಿದರೆ ನನಗೆ ಸಂತೋಷವಾಗುತ್ತದೆ” ಎಂದು ಮಾಜಿ ಸಚಿವ ಕೆ. ಎನ್ ರಾಜಣ್ಣ ಹೇಳಿದರು
ಮಧುಗಿರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವೋಟ್ ಚೋರಿ ವಿಚಾರದಲ್ಲಿ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಕೆಲಸ. ಹಳ್ಳಿಗಳಲ್ಲಿ ನಕಲಿ ವೋಟ್ ಹಾಕಲು ಅವಕಾಶವಿಲ್ಲ, ಆದರೆ ನಗರಗಳಲ್ಲಿ ಇದು ಹೆಚ್ಚಾಗಿದೆ. ಆರ್ ಎಸ್.ಎಸ್ ನವರು ಸಿಸ್ಟಮ್ಯಾಟಿಕ್ ಆಗಿ ನಡೆಸುತ್ತಾರೆ” ಎಂದು ಆರೋಪಿಸಿದರು.
ಸಚಿವ ಸ್ಥಾನ ವಜಾ ವಿಚಾರ “ಇದು ಮುಖ್ಯಮಂತ್ರಿ ನಿರ್ಧಾರವಲ್ಲ, ಹೈ ಕಮಾಂಡ್ ನಿರ್ಧಾರ. ಮೂವರು ದೆಹಲಿಯಲ್ಲಿ ಪಿತೂರಿ ಮಾಡಿದ್ದಾರೆ. ಆದರೆ ನಾನು ಜನರ ಸೇವೆ ಮಾಡಲು ಬಳಸುತ್ತೇನೆ. ಸಮಯ ಬಂದಾಗ ಮತ್ತೆ ಸಚಿವ ಸ್ಥಾನ ಪಡೆಯುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“1998ರಲ್ಲಿ ವಿಧಾನ ಪರಿಷತ್‌ಗೆ ಅತಿ ಹೆಚ್ಚು ಬಹುಮತದಲ್ಲಿ ಗೆದ್ದಿದ್ದೆ. 2004ರಲ್ಲಿ ಟಿಕೆಟ್ ಸಿಗಲಿಲ್ಲ. ಮಧುಗಿರಿಯಲ್ಲಿ ಮೊದಲ ಬಾರಿ ಸೋಲು ಅನುಭವಿಸಿದ್ದೇನೆ, ಆದರೆ ಗೆಲುವು, ಸೋಲನ್ನು ಒಂದೇ ರೀತಿಯಾಗಿ ಸ್ವೀಕರಿಸಿದ್ದೇನೆ” ಎಂದು ನೆನಪಿಸಿಕೊಂಡರು.
“ನಾನು ಸುಳ್ಳು ಹೇಳುವುದಿಲ್ಲ. ಅಧಿಕಾರಕ್ಕಿಂತ ಜನರ ಪ್ರೀತಿ ಮುಖ್ಯ. ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡುತ್ತಿದ್ದಾರೆ, ಅದರಿಂದ ಖುಷಿ ಇದೆ” ಎಂದರು.
ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನದಲ್ಲಿದ್ದೇನೆ ಎಂಬುದು ಸಹ ಅವರು ಬಹಿರಂಗಪಡಿಸಿದರು. ದೆಹಲಿಗೆ ತೆರಳಿ ಬಂದ ಬಳಿಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದರು.