ಶಿವಮೊಗ್ಗ, ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಮಧುಬಂಗಾರಪ್ಪ ಹೇಳಿದರು.
ಧರ್ಮಸ್ಥಳ ಮತ್ತು ವಿರೇಂದ್ರ ಹೆಗಡೆ ಅವರ ಬಗ್ಗೆ ವೈಯುಕ್ತಿಕವಾಗಿ ಗೌರವವಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಷಡ್ಯಂತ್ರ ನಡೆದಿರಬಹುದು ಎಂಬ ಅಭಿಪ್ರಾಯವಿದೆ.
ಆದರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸತ್ಯ ಏನು ಎಂಬುದನ್ನು ಬೆಳಕಿಗೆ ತರಲು ಸರ್ಕಾರ ತನಿಖೆ ನಡೆಸುತ್ತಿದೆ . ಸಾಮಾಜಿಕ ಜಾಲ ತಾಣಗಳಲ್ಲಿ ಎರಡೂ ಬಗೆಯ ಚರ್ಚೆಗಳು ನಡೆಯುತ್ತಿವೆ. ಅತಿಸೂಕ್ಷ್ಮ ವಿಷಯ ಇದಾಗಿದ್ದು, ಈ ಬಗ್ಗೆ ಮಾತಾಡದೆ ಇರುವುದೇ ಒಳ್ಳೆಯದು ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಧರ್ಮಸ್ಥಳದ ವಿರುದ್ದ ಷಡ್ಯಂತ್ರ ನಡೆದಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಬಗ್ಗೆ ಅವರ ಬಳಿಯೇ ಕೇಳಿ ಎಂದರು ಪತ್ರಕರ್ತರಿಗೆ ಹೇಳಿದರು.