ಬಿ ಆರ್ ಅಂಬೇಡ್ಕರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಇವರ ಜಂಟಿ ಆಶ್ರಯದಲ್ಲಿ ನಡೆದ 79ನೇ ಸ್ವಾತಂತ್ರ್ಯ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಈ ದೇಶದಲ್ಲಿ ಈವರೆಗೆ ಆರ್ ಎಸ್ ಎಸ್ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸದೆ ಇರುವ ದೇಶಭಕ್ತರು ಇಂದು ಪ್ರಜಾಪ್ರಭುತ್ವದಲ್ಲಿ ಸರ್ವರಿಗೂ ಒಂದೇ ಮತ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಮತಗಳ್ಳತನ ಮಾಡಿಯೂ ಅಧಿಕಾರ ಚುಕ್ಕಾಣಿ ಹಿಡಿಯಬಹುದೆಂದು ಇದೀಗ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಮತದಾರ ಪಟ್ಟಿ ಪರಿಷ್ಕರಣೆಯಾಗಲಿದೆ. ಈ ಬಗ್ಗೆ ಶೋಷಿತರು ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರು ಜಾಗೃತ ಇರುವಂತೆ ಈ ದೇಶದ ಸಂವಿಧಾನವನ್ನು ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

79ನೇ ಸ್ವಾತಂತ್ರ್ಯೋತ್ಸವ ದ ಧ್ವಜಾರೋಹಣವನ್ನು ಅಂಚೆ ಇಲಾಖೆ ಸಹಾಯಕರಾದ ಸುರೇಂದ್ರ ಕೋಟ್ಯಾನ್ ನೆರವೇರಿಸಿ ಶುಭ ಸಂದೇಶವನ್ನು ನೀಡಿದರು ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷ ರಾದ ಸುರೇಶ್ ಕೋಟ್ಯಾನ್ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ವಿನಯ, ಸಹರಾ ಕ್ರಿಕೆಟರ್ ಇದರ ಅಧ್ಯಕ್ಷರಾದ ಸುದರ್ಶನ್ ನಿವೃತ್ತ ನೌಕರ ಗೋಪಾಲ್, ಶ್ರೀಮತಿ ಅಕ್ಕಣಿ ಟೀಚರ್ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಜನಪದ ಕಲಾವಿದ ಶಂಕರ್ ದಾಸ್ ರವರಿಂದ ದೇಶಭಕ್ತಿ ಗಾಯನ ಕಾರ್ಯಕ್ರಮ ನಡೆಸಿ ಹಾಗೂ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ನಮ್ಮ ಮುಖ್ಯ ಪದಾಧಿಕಾರಿಗಳಾದ ಮೋಹನ್ ಜಗನ್ನಾಥ ಸುಧಾಕರ ಹರೀಶ ಪ್ರಕಾಶ ಮಧುಕರ ಸದಾನಂದ ಮತ್ತಿತರು ಆಗಮಿಸಿದ್ದರು ಸುಧಾಕರ್ ಧನ್ಯವಾದ ನೀಡಿದರು.