ಅಂಬೇಡ್ಕರ್ ಯುವಕ ಮಂಡಳ (ರಿ) ತೆಂಕು ಬಿರ್ತಿ ಬ್ರಹ್ಮಾವರ ಮತ್ತು ಆದಿಧ್ರಾವಿಡ ಸಹಕಾರಿ ಸಂಘ (ರಿ) ತೆಂಕು ಬಿರ್ತಿ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಭಾರತದ 79 ನೆಯ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು. ನ್ಯಾಷನಲ್ ಇನ್ಸೂರೆನ್ಸ್ ಇದರ ನಿವ್ರತ್ತ ಅಧಿಕಾರಿ ಬೋಜರಾಜ್ ತಲ್ಲೂರು ಅವರು ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಅವರು ಯುವಕರು ಇನ್ನು ಮುಂದೆ ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಾ ಕೂರಬೇಡೀ.ಈಗ ಉದ್ಯೋಗ ಅವಕಾಶವೇ ಕಡಿಮೆ ಆಗಿದೆ. ಎಲ್ಲವೂ ಖಾಸಗೀಕರಣ ಆಗುತ್ತಿದೆ. ಹಾಗಾಗಿ ಮೀಸಲಾತಿಗೆ ಅವಕಾಶವೇ ಕ್ಷೀಣಿಸುತ್ತಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಯುವಕರೆಲ್ಲಾ ಸ್ವ ಉದ್ಯೋಗದ ಕಡೆ ಮುಖ ಮಾಡಬೇಕು. ನಮ್ಮ ಉದ್ಧಾರಕ್ಕೆ ಯಾರನ್ನೋ ನಂಬಿಕೊಂಡು ಕೂರುವುದು ಬೇಡ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಳ್ಳಿ ಎಂದು ಕರೆಕೊಟ್ಟರು.ಶ್ರಮವಹಿಸಿ ವ್ಯಾಪಾರ ವಹಿವಾಟು ಮಾಡಿ ಸ್ವಂತ ಅಭಿವೃದ್ಧಿ ಮಾಡಿಕೊಳ್ಳುವ ಅನಿವಾರ್ಯತೆ ಇದೇ ಎಂದು ನಮ್ಮ ಮೇಲಿದೆ ಎಂದರು.
ಹಾಗೆಯೇ ಭಾರತದ ಪವಿತ್ರ ಸಂವಿಧಾನ ವನ್ನು ಉಳಿಸಿಕೊಂಡು ಕಾಪಾಡಿಕೊಂಡು ಬರುವ ಹೊಣೆಯೂ ನಮ್ಮ ಮೇಲಿದೆ ಎಂದರು. ಧ್ವಜಾರೋಹಣ ಮಾಡಿ ಮಾತನಾಡಿದ ಭೋಜರಾಜ್ ತಲ್ಲೂರು ಅವರು ನಮ್ಮ ಹಿರಿಯರು ಸ್ವಾತಂತ್ರ್ಯ ಹೋರಾಟ ಗಾರರು ತಮ್ಮ ಪ್ರಾಣ ತೆತ್ತು ಸಾಕಷ್ಟು ಕಷ್ಟ ಅನುಭವಿಸಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಅದನ್ನು ಅದನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಅಂಬೇಡ್ಕರ್ ಯುವಕ ಮಂಡಳದ ಕಾರ್ಯದರ್ಶಿ ಅನಿಲ ಬಿರ್ತಿ, ಆದಿಧ್ರಾವಿಡ ಸಹಕಾರಿ ಸಂಘದ
ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಬಿರ್ತಿ, ದ.ಸಂ.ಸ. ತಾಲೂಕು ಸಂಚಾಲಕರಾದ ಹರೀಶ್ಚಂದ್ರ ಬಿರ್ತಿ, ವರ್ಣ ವಿಶ್ವನಾಥ, ಬಿರ್ತಿ ಸುರೇಶ, ಶಿವಾನಂದ ಬಿರ್ತಿ, ಕಿಶನ್ ಕುಮಾರ್, ಸಂತೋಷ ಬಿರ್ತಿ, ಮೊದಲಾದವರು ಉಪಸ್ಥಿತರಿದ್ದರು.