79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ಸಲುವಾಗಿ ಎಲ್ಲಾ ಸಮುದಾಯದವರು ಸೇರಿ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಸಂಘ ಸಂಸ್ಥೆಯವರು ಭಾಗವಹಿಸಿ ಚಿಕ್ಕಮಗಳೂರು ನಗರದ ಎದ್ದೇಳು ಕರ್ನಾಟಕ ಕಚೇರಿಯಲ್ಲಿ ನೆರವೇರಿಸಲಾಯಿತು.
ಜನ ಚಳುವಳಿ ಸ್ವಾತಂತ್ರ್ಯ ಚಳುವಳಿ ರೂಪುಗೊಂಡು ಹಲವಾರು ಮಹನೀಯರ ಶ್ರಮದಿಂದ ಸ್ವಾತಂತ್ರ್ಯ ದೊರಕಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಸಾಧನೆ ಮುಂದಿನ ಪೀಳಿಗೆಗೆ ತಿಳಿಯಬೇಕು ಅರ್ಥ ಮಾಡಿಸಬೇಕಾಗಿದೆ. ಯಾವುದೇ ಒಂದು ಜಾಗಕ್ಕೆ ಮಾತ್ರವಲ್ಲದೆ ಮನೆ ಮನೆಗೆ ಸೀಮಿತವಾಗಿ ಸ್ವಾತಂತ್ರ್ಯ ದಿನವನ್ನು ನಾವೆಲ್ಲರೂ ಆಚರಿಸಬೇಕು ಎಂದು ಎದ್ದೇಳು ಕರ್ನಾಟಕ ಮುಖಂಡರಾದ ಗೌಸ್ ಮೋಹದ್ದೀನ್ ತಿಳಿಸಿದರು.
ಭಾರತ ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಹಾಗೆಯೇ, ನಮ್ಮ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ ಈ ದಿನವನ್ನು ಆಚರಿಸುತ್ತೇವೆ. ಸಾಮಾಜಿಕವಾಗಿ ಹೋರಾಟವನ್ನು ಮಾಡಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿರುವ ಮಹನೀಯರು ಹಾಗೂ ನಮಗೆ ಸ್ವಾತಂತ್ರ್ಯ ಬರುವುದಕ್ಕೆ ಅದೆಷ್ಟೋ ಜನ ಪ್ರಾಣವನ್ನು ತೆತ್ತಿದ್ದಾರೆ ಅವರಿಗೆ ಸ್ಮರಿಸೋಣ ಎಂದು ಕಾರ್ಯಕ್ರಮದಲ್ಲಿ ಗೌಸ್ ಮುನೀರ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l 79ನೇ ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ ನೆರವೇರಿಸಿದ ಸಚಿವ ಕೆ.ಜೆ ಜಾರ್ಜ್
ಈ ವೇಳೆ ಕರ್ನಾಟಕ ಜನಶಕ್ತಿ, ಶ್ರಮಿಕ ಶಕ್ತಿ, ಎದ್ದೇಳು ಕರ್ನಾಟಕ, ದಸಂಸ ಸಂಘಟನೆ ಹಾಗೂ ಇನ್ನಿತರರು ಭಾಗವಹಿಸಿದರು.