ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಸಂಸೆ ಗ್ರಾಮದ ಅಮಾಯಕ ಆಟೋ ಚಾಲಕ ನಾಗೇಶ್ ಎಂಬ ದಲಿತ ಯುವಕನ ದುರಂತ ಸಾವಿಗೆ ಪೊಲೀಸರ ದೌರ್ಜನ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಈ ಕುರಿತು ನ್ಯಾಯ ಸಿಗದಿದ್ದರೇ ಬೃಹತ್ ಪ್ರತಿಭಟನೆ ಮಾಡುತ್ತೇವೆಂದು ದಸಂಸ ಕರೆ ನೀಡಿದೆ.
ಕಾವಲುಗಾರರೇ ಹಂತಕರಾದಾಗ, ನ್ಯಾಯಕ್ಕೆ ಧ್ವನಿಯಾಗಬೇಕಿದೆ. ನಾಗೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮತ್ತಷ್ಟು ನೋವಿನ ಸಂಗತಿಯಾಗಿದೆ. ಕೇವಲ ಒಂದು ಆತ್ಮಹತ್ಯೆಯಲ್ಲ, ಪೊಲೀಸ್ ದಬ್ಬಾಳಿಕೆಗೆ ಬಲಿಯಾದ ನಾಗೇಶ್ ಸಾವಿಗೆ ನ್ಯಾಯ ಸಿಗಬೇಕು. ಸಾವಿಗೆ ನೇರ ಕಾರಣರಾದ ಪೊಲೀಸ್ ಪೇದೆಯಾದ ಸಿದ್ದೇಶ್ ಮತ್ತು ಸಹಚರರಾದ ಸುರಕ್ಷಿತ್, ಶಶಿ ಮತ್ತು ಸುಳ್ಳು ಕೇಸು ದಾಖಲಿಸಿ ಆರೋಪಿಗಳಿಗೆ ನೆರವಾದ ಭ್ರಷ್ಟ ಪಿಎಸ್ಐ ಆದರ್ಶ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದಸಂಸ ಮುಖಂಡರಾದ ಆಶಾ ಸಂತೋಷ್ ಈದಿನ.ಕಾಮ್ ಜೊತೆ ಮಾತಾಡಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ದಲಿತ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಿ: ಕರ್ನಾಟಕ ಜನಶಕ್ತಿಯಿಂದ ಕಳಸ ಚಲೋ ಎಚ್ಚರಿಕೆ
ನಾಗೇಶ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೇ ಕರ್ನಾಟಕದಾದ್ಯಂತ ಎಲ್ಲಾ ಸಂಘಟನೆಯವರು ಒಗ್ಗಟ್ಟಾಗಿ ಬೃಹತ್ ಹೋರಾಟ ಮಾಡುತ್ತೇವೆಂದು ದಸಂಸ ಮುಖಂಡೆ ಆಶಾ ಸಂತೋಷ್ ತಿಳಿಸಿದರು.
https://shorturl.fm/fxbTQ
https://shorturl.fm/lHQR1