ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಐ ಪೆರಿಯಸಾಮಿ ಮತ್ತು ಅವರ ಕುಟುಂಬಕ್ಕೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿದೆ. ಪೆರಿಯಸಾಮಿ ಅವರು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ಗಳು ಮತ್ತು ಪಂಚಾಯತ್ ಒಕ್ಕೂಟಗಳ ಸಚಿವರಾಗಿದ್ದಾರೆ.
ಪೆರಿಯಸಾಮಿ ಅವರ ಪುತ್ರ, ಶಾಸಕ ಐ ಪಿ ಸೆಂಥಿಲ್ ಕುಮಾರ್ ಅವರ ಮೇಲೂ ಶೋಧ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಇಡಿ ಸಮನ್ಸ್
ಇನ್ನೆರಡು ತಂಡಗಳು ಸಚಿವರ ಪುತ್ರ ಮತ್ತು ಪಳನಿ ಶಾಸಕ ಐ.ಪಿ. ಸೆಂಥಿಲ್ ಕುಮಾರ್ ಅವರ ಸೀಲಪಾಡಿಯಲ್ಲಿರುವ ಮನೆ ಮತ್ತು ಸಚಿವರ ಪುತ್ರಿ ಇಂದ್ರಾಣಿ ಅವರ ದಿಂಡಿಗಲ್‌ನ ವಲ್ಲಲಾರ್ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸುತ್ತಿವೆ.
ಪೆರಿಯಸಾಮಿ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ (ಡಿಎ) ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಏಪ್ರಿಲ್ 29ರಂದು ಮರು ತನಿಖೆಗೆ ಆದೇಶಿಸಿದೆ.
