ಹಾಸನ | ವರ್ಷಾಂತ್ಯದ ವೇಳೆಗೆ 2 ಲಕ್ಷ ಮಂದಿಗೆ ಭೂಮಿ ಮಂಜೂರು ಗುರಿ: ಸಚಿವ ಕೃಷ್ಣ ಬೈರೇಗೌಡ

Date:

Advertisements

ಈ ವರ್ಷಾಂತ್ಯದ ವೇಳೆಗೆ ರಾಜ್ಯದಲ್ಲಿ 2 ಲಕ್ಷ ದರಕಾಸ್ತು ಪೋಡಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಭೂಮಿ ಮಂಜೂರುದಾರರಿಗೆ ವಿತರಿಸಲಾಗುವುದು ಎಂದು ಕಂದಾಯ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಭೂಮಿ ಮಂಜೂರಾಗಿರುವ ಸುಮಾರು 3 ಲಕ್ಷ ಕುಟುಂಬಗಳಿಗೆ ಜಮೀನು ಸಾಗುವಳಿ ಚೀಟಿ, ಆರ್‌ಟಿಸಿ ಇದೆ. ಆದರೆ, ಪೋಡಿ ಆಗಿಲ್ಲ, ಸರ್ವೆ ಆಗಿಲ್ಲ. ಇಂದರಿಂದ ಅಂತಹ ಕುಟುಂಬಗಳು ಜಮೀನನ್ನು ಭಾಗ ಮಾಡಿಕೊಳ್ಳಲು, ಮಾರಾಟ ಮಾಡಲು ಹಕ್ಕು ಇರಲಿಲ್ಲ. ಇದಕ್ಕಾಗಿ ಪೋಡಿ ಮಾಡಿಸಿಕೊಳ್ಳಲು ಬಡ ಜನರು ತಾಲೂಕು ಅಥವಾ ಸರ್ವೆ ಕಚೇರಿಗೆ ಅಲೆಯೋದು ನಡೆಯುತ್ತಿದೆ. ಕೆಲವರು ಮಧ್ಯವರ್ತಿಗಳ ಧನದಾಹಕ್ಕೆ ಬಲಿಯಾಗುತ್ತಿದ್ದಾರೆ” ಎಂದು ಬೇಸರ ಹೊರ ಹಾಕಿದರು.

“ಇದನ್ನು ಸರ್ಕಾರ ಮನಗಂಡು ಪೋಡಿ ನಿಯಮಗಳನ್ನು ಸರಳೀಕರಣ ಮಾಡಲಾಗಿದೆ. ಅಗತ್ಯ ದಾಖಲೆಗಳನ್ನು 5-3ಕ್ಕೆ ಇಳಿಸಿ, ಎಲ್ಲ ದಾಖಲೆಗಣನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಯಾರೂ ಅರ್ಜಿ ಹಾಕೋದು ಬೇಡ. ನಾವೇ ಸರ್ವೆ ಮಾಡಿ, ಬಾಕಿ ಇರುವ ದಾಖಲೆ ಟ್ರ್ಯಾಕಿಂಗ್ ಮಾಡಲಾಗುತ್ತದೆ. ಭೂಮಿ ದರಕಾಸ್ತು ಪೋಡಿ ಮಾಡಲು ಈವರೆಗೆ 2.51 ಲಕ್ಷ ಭೂ ಮಂಜೂರಿದಾರರನ್ನು ಗುರುತಿಸಲಾಗಿದೆ. ಈ ಪೈಕಿ 1.41 ಲಕ್ಷ ಸ.ನಂ.ಗಳಲ್ಲಿ, 73,300 ರೈತರಲ್ಲಿ 1-5 ದಾಖಲೆ ಇವೆ. 67 ಸಾವಿರ ಪ್ರಕರಣಗಳಲ್ಲಿ 1-5 ದಾಖಲೆ ಹೊಂದಿಸುವುದು ಬಾಕಿ ಇದೆ. ಮುಂದಿನ 4 ತಿಂಗಳೊಗಳಗೆ ಈ ಕಾರ್ಯ ಪೂರ್ಣಗೊಳಿಸುವ ಗುರಿ ಇದೆ” ಎಂದರು.

Advertisements

“ನಿಯಮದ ಪ್ರಕಾರ 1.17 ಲಕ್ಷ ಪ್ರಕರಣಗಳ ಸರ್ವೆ ಮುಗಿದಿದ್ದು, 1.27 ಲಕ್ಷ ಕಡತ ಮಿಸ್ಸಿಂಗ್ ಸಮಿತಿಗೆ ಹೋಗಿದೆ. ಕನಿಷ್ಟ ಮೂರು ದಾಖಲೆಯೂ ಇಲ್ಲದ ಕೇಸ್‌ಗಳಲ್ಲಿ 2 ದಾಖಲೆ ಇದ್ರೆ ಪೋಡಿ ಮಾಡಿ ಅನುಮತಿ ಕೊಡಿ ಎಂದು ಎಲ್ಲ ಡಿಸಿಗಳಿಗೆ ಸೂಚಿಸಲಾಗಿದೆ. ಡಿಸೆಂಬರ್ ವೇಲೆ 2 ಲಕ್ಷ ಪೋಡಿಗಳನ್ನು ವಿತರಿಸಲಾಗುವುದು” ಎಂದು ಘೋಷಿಸಿದರು.

“2012-18ರವರೆಗೆ 5800 ಪೋಡಿ ಮಾಡಲಾಗಿತ್ತು. 2018-2023 ರವರೆಗ ಅದು 8005ಕ್ಕೆ ಏರಿದೆ. ಇದೀಗ 2 ವರ್ಷದಲ್ಲಿ 2 ಲಕ್ಷ ಮಂಜೂರಿದಾರರಿಗೆ ಪೋಡಿ ವಿತರಿಸಲು ಮುಂದಾಗಿದ್ದೇವೆ. ಕಳೆದ 2 ವರ್ಷಗಳಲ್ಲಿ ಕಂದಾಯ ಇಲಾಖೆಯಲ್ಲಿ ನಿರಂತರ ಬದಲಾವಣೆ ತರಲಾಗಿದೆ. ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ಮಧ್ಯವರ್ತಿಗಳ ಶೋಷಣೆ ತಡೆಯಲು ರಾಜ್ಯದ ತಹಸೀಲ್ದಾರ್ ಮತ್ತು ಎಸಿ ಕೋರ್ಟ್‌ಗಳಲ್ಲಿ ವರ್ಷಾನುಗಟ್ಟಲೆ ವಿಲೆ ಆಗದೇ ಉಳಿದಿದ್ದ 10,774 ಅವಧಿ ಮೀರಿದ ಪ್ರಕರಣಗಳಲ್ಲಿ ಭೂ ನ್ಯಾಯ ವಿಲೇವಾರಿ ಆಂದೋಲನ ನಡೆಸಿ ಜೂನ್ ಅಂತ್ಯಕ್ಕೆ 10,358 ಪ್ರಕರಣ ಇತ್ಯರ್ಥಗೊಳಿಸಲಾಗಿದ್ದು, 416 ಬಾಕಿ ಇವೆ” ಎಂದರು.

“ಹಾಗೆಯೇ ಎಸಿ ಕೋರ್ಟ್‌ಗಳಲ್ಲಿ ಅವಧಿ ಮೀರಿದ 62,857 ಪ್ರಕರಣ ಇದ್ದವು. ಇವುಗಳಲ್ಲೀಗ 18,166 ಕೇಸ್ ಬಾಕಿ ಇವೆ. 1 ವರ್ಷ ಮೀರಿದ್ದ 59,339 ಪ್ರಕರಣಗಳಲ್ಲಿ 14,652 ಹಾಗೂ 5 ವರ್ಷ ತುಂಬಿದ್ದ 32,797 ಪ್ರಕರಣಗಳಲ್ಲಿ ಕೇವಲ 4601 ಬಾಕಿ ಇವೆ. ಇದರಿಂದ ಜನರಿಗೆ ರಿಲೀಫ್ ಸಿಕ್ಕಿದೆ ಅನ್ನೋ ತೃಪ್ತಿ ನಮ್ಮದು” ಎಂದರು.

ಇದನ್ನೂ ಓದಿ: ಹಾಸನ | ಆರೋಗ್ಯ, ಶಿಕ್ಷಣಕ್ಕಾಗಿ ಹೋರಾಟ ಮಾಡಬೇಕಾದಂತಹ ದುಃಸ್ಥಿತಿ ಬಂದೊದಗಿದೆ: ಸಿಐಟಿಯು ಧರ್ಮೇಶ್

“ತಾಲೂಕು ಕಚೇರಿಗಳಲ್ಲಿ ನಕಲಿ ದಾಖಲಿ ಸೃಷ್ಟಿ ದಂಧೆ, ಸಮಾಜಕ್ಕೆ ಹಾನಿಯಾಗುವ ರೀತಿಯಲ್ಲಿ ನಡೆದಿದೆ. ಎಷ್ಟೋ ದಾಖಲೆ ಕಳೆದು ಹೋಗಿ ಜನರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಕಾಣೆಯಾಗಿರುವ ಶಿಥಿಲೀಕರಣಗೊಂಡಿರುವ, ಮಿಸ್ ಪ್ಲೇಸ್ ಆಗಿರುವ ಸುಮಾರು ಭೂ ದಾಖಲೆ ಸುರಕ್ಷಾ ಯೋಜನೆಯಡಿ 100 ಕೋಟಿ ಪುಟಗಳ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ ಸುಮಾರು 36 ಕೋಟಿ ಪುಟ ಸ್ಕ್ಯಾನಿಂಗ್ ಮಾಡಲಾಗಿದ್ದು, ಎಲ್ಲ ಪೂರ್ಣಗೊಂಡರೆ ಫೋರ್ಜರಿ ದಾಖಲೆ ಸೃಷ್ಟಿ ನಡೆಯಲ್ಲ. ರೈತರು ಇದ್ದಲ್ಲಿಯೇ ಫಿಂಗರ್ ಟಿಪ್ಸ್ ಮೂಲಕ ಆನ್‌ಲೈನ್‌ನಲ್ಲಿ ಪ್ರಮಾಣೀಕೃತ ಭೂ ದಾಖಲೆ ಪಡೆಯಬಹುದು” ಎಂದರು.

52 ಲಕ್ಷ ಜಮೀನುದಾರರು ಮೃತರಾಗಿದ್ದರೂ, ಇರುವವರ ಹೆಸರಿಗೆ ಪೌತಿ ಖಾತೆ ಆಗಿಲ್ಲ. ಸರ್ಕಾರವೇ ಸ್ವಯಂ ಪ್ರೇರಣೆಯಿಂದ ಪೌತಿ ಖಾತೆ ಮಾಡಿ, ಗ್ರಾಮ ಲೆಕ್ಕಿಗರ ಮೂಲಕ ಜನರ ಮನೆ ಬಾಗಿಲಿಗೆ ಇ ಪೌತಿಖಾತೆ ನೀಡುವ ಕಾರ್ಯ 3 ತಿಂಗಳಿಂದ ರಾಜ್ಯಾದ್ಯಂತ ನಡೆಯುತ್ತಿದೆ. 2.81 ಲಕ್ಷ ಜಮೀನಿಗೆ ಅಭಿಯಾನದ ಮೂಲಕ ಪೌತಿ ಖಾತೆ ನೀಡಲಾಗುವುದು. ಹಾಸನ ಜಿಲ್ಲೆಯಲ್ಲಿ 10 ಸಾವಿರ ದರಕಾಸ್ತು ಪೋಡಿ ಹಾಗೂ ಪೌತಿಖಾತೆ ಕಾರ್ಯ ನಡೆದಿದೆ” ಎಂದು ಮಾಹಿತಿ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

ಹಾವೇರಿ | ಮಾದಕ ವಸ್ತು ಮಾರಾಟ; ನಾಲ್ವರು ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ...

ಶಿವಮೊಗ್ಗ | ಕಾಂಗ್ರೆಸ್ ಕಚೇರಿಯಲ್ಲಿ ಅರಸು ಮತ್ತು ರಾಜೀವ್‍ಗಾಂಧಿಯವರ ಜನ್ಮದಿನಾಚರಣೆ

ಶಿವಮೊಗ್ಗ, ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ನಾಯಕ ಹಾಗೂ...

ಶಿವಮೊಗ್ಗ | ಆರು ಜಿಲ್ಲೆಯ ಮುಖಂಡರಿಂದ ಅಹಿಂದ ಸಮಾವೇಶದ ಪೂರ್ವಭಾವಿ ಸಭೆ : ತೀ.ನ. ಶ್ರೀನಿವಾಸ್

ಶಿವಮೊಗ್ಗ, ಮಲೆನಾಡು ರೈತರ ಸಮಸ್ಯೆ ಹಾಗೂ ಕಾಂತ್‌ರಾಜ್ ವರದಿಯ ಜಾರಿಗೆ ಆಗ್ರಹಿಸಿ...

Download Eedina App Android / iOS

X