ಶೈಕ್ಷಣಿಕವಾಗಿ ಇನ್ನಷ್ಟು ಬದಲಾವಣೆ ಆಗಬೇಕಿದೆ. ಶೈಕ್ಷಣಿಕ ಬದಲಾವಣೆಯಾದರೆ ಮಾತ್ರ ದೇಶ ಪರಿವರ್ತನೆಯಾಗುತ್ತದೆ. ಶೈಕ್ಷಣಿಕ ಪ್ರಗತಿಯಲ್ಲಿ ದೇಶದ ಪ್ರಗತಿ ಅಡಗಿದೆ. ಇಂಡಿ ಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ಆಗಬೇಕೆಂಬ ಗುರಿಯಿದೆ. ಹೀಗಾಗಿ ಶಿಕ್ಷಣ ಮತ್ತು ನೀರಾವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಆಡಳಿತದಿಂದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಇಂಡಿ ತಾಲೂಕಿನ ನಿಂಬೆಗೆ ದೊರಕಿರುವ ಜಿಐ ಟ್ಯಾಗ್‌ನಿಂದ ಇಂಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಚೆಲ್ಲಿದೆ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಇಂಡಿ, ಭವಿಷ್ಯದಲ್ಲಿ ಮುಂದುವರೆದ ತಾಲೂಕು ಆಗಲಿದೆ. ಸಿಎಂ ಸಿದ್ದರಾಮಯ್ಯನವರೇ ಇದನ್ನು ಹೇಳಿದ್ದಾರೆ” ಎಂದರು.
“ಜಿಲ್ಲೆಗೆ ಮಂಜೂರು ಆಗಬೇಕಾಗಿದ್ದ ಕಾರ್ಮಿಕ ಮಕ್ಕಳ ವಸತಿ ಶಾಲೆಯನ್ನು ಇಂಡಿ ತಾಲೂಕಿಗೆ ತಂದಿದ್ದೇನೆ. ಮಾತಿಗಿಂತ ಕಾರ್ಯಗಳು ಮಾತನಾಡಬೇಕು ಎಂಬ ಸಿದ್ದಾಂತ ಹೊಂದಿದವನು ನಾನು. ಕೇಂದ್ರ, ರಾಜ್ಯಗಳು ಸಮನ್ವಯತೆಯಿಂದ ಆಡಳಿತ ನಡೆಸಬೇಕಾಗಿದೆ. ದೇಶಾಭಿಮಾನದಿಂದ ಹುತಾತ್ಮರ ಕನಸು ನನಸು ಮಾಡಲು ಶ್ರಮಿಸಬೇಕಾಗಿದೆ. ಡಾ.ಅಂಬೇಡ್ಕರ್ ಅವರ ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತದ ಆಧಾರದ ಮೇಲೆ ರಾಜ್ಯ ಸರ್ಕಾರ ನಡೆಯುತ್ತಿದೆ. ಜನರ ಕಲ್ಯಾಣಕ್ಕೆ ಸಂವಿಧಾನವೇ ಸ್ಫೂರ್ತಿಯಾಗಿದೆ. ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡು ನಮ್ಮದ್ದು, ತ್ಯಾಗ, ಬಲಿದಾನದಲ್ಲಿಯೂ ನಮ್ಮ ಜಿಲ್ಲೆ ಮುಂದಿದೆ. ಜಿಲ್ಲೆಯಲ್ಲಿ ಮಳೆಯಾಗಿದೆ. ಕಾಲುವೆ ಮೂಲಕವೂ ಕೆರೆಗಳನ್ನು ತುಂಬಿಸಲಾಗಿದೆ” ಎಂದು ಹೇಳಿದರು.
“ನಮ್ಮ ಪೂರ್ವಜರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನ ಆಗಸ್ಟ್ 15. ತ್ಯಾಗ, ಬಲಿದಾನದ ಮೂಲಕ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಇಂದು ನಾವೆಲ್ಲರೂ ಸಂಭ್ರಮಿಸುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ತಳಕಲ್‌ನಲ್ಲಿ 20 ಮಂದಿ ಮೇಲೆ ಬೀದಿ ನಾಯಿಗಳ ದಾಳಿ: ಇಬ್ಬರು ಬಾಲಕರು ಜಿಲ್ಲಾಸ್ಪತ್ರೆಗೆ ದಾಖಲು
ಡಿವೈಎಸ್‌ಪಿ ಜಗದೀಶ ಎಚ್ ಎಸ್ ತಹಶೀಲ್ದಾರ್ ಬಿ ಎಸ್ ಕಡಭಾವಿ, ತಾಪಂ ಇಒ ಡಾ. ಬಿ ಎಚ್ ಕನ್ನೂರ, ಪುರಸಭೆ ಮುಖ್ಯಾಧಿಕಾರಿ ಸಿದ್ರಾಯ ಕಟ್ಟಿಮನಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ ಬೊರಾಮಣಿ, ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಬಿಇಒ ಮುಜಾವರ, ಭೀಮನಗೌಡ ಪಾಟೀಲ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಸಾಗರ ಬಿರಾದಾರ, ಶ್ರೀಶೈಲಗೌಡ ಪಾಟೀಲ, ಜಹಾಂಗೀರಸೌದಾಗರ, ಮುಸ್ತಾಕ ಇಂಡಿಕರ, ಭೀಮಾಶಂಖರ ಮೂರಮನ, ಉಮೇಶ ದೇಗಿನಾಳ, ಸತೀಶ ಕುಂಬಾರ, ಶಬ್ಬಿರ ಖಾಜಿ, ಅಯುಬ ಬಾಗವಾನ, ಜಾವೇದ ಮೋಮಿನ, ಬಾಬು ಗುಡಮಿ, ಮಹಾದೇವಪ್ಪ ಏವೂರ, ಎಚ್.ಎಸ್.ಪಾಟೀಲ, ದಯಾನಂದ ಮಠ, ಭೀಮಣ್ಣ ಕವಲಗಿ, ಸಿಪಿಐ ಪ್ರದೀಪ ಭೀಸೆ, ಪಿಎಸೈ ಸುರೇಶ ಗೆಜ್ಜಿ, ಚಂದ್ರಶೇಖರ ವಾಲಿಕಾರ, ಎಸ್.ರ್ಆ.ಮೇಂಡೆಗಾರ, ಮಂಜುನಾಥ ಧೂಳೆ, ಉಮೇಶ ಲಮಾಣಿ, ಎಸ್ ಬಿ ಗದ್ಯಾಳ, ಹಣಮಂತ ಅರವತ್ತು, ಬಸವರಾಜ ರಾವೂರ, ಸಂತೋಷ ಬೊರಗಿ ಸಂಜೀವ ಹೊಟಗಾರ ಕಾರ್ಯಕ್ರಮದಲ್ಲಿ ಇದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರ ಮಗಳು ನಡೆದವು. ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರು ಸನ್ಮಾನಿಸಿದರು.