ಕೋಲಾರ | ಗುಟ್ಟಹಳ್ಳಿ ಸರ್ಕಾರಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Date:

Advertisements

ದೇಶದ ಭವಿಷ್ಯ ರೂಪಿಸುವುದರಲ್ಲಿ ಮಕ್ಕಳ ಪಾತ್ರ ಬಹಳ ಮುಖ್ಯ. ಪ್ರತಿಯೊಬ್ಬರೂ ಘನತೆಯಿಂದ ಬದುಕುವಂತಾದಾಗ ಸ್ವಾತಂತ್ರ್ಯ ದಿನಾಚರಣೆಗೆ ಒಂದು ಅರ್ಥ ಸಿಗುತ್ತದೆ ಎಂದು ಗುಟ್ಟಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎನ್ ಪ್ರಕಾಶ್ ತಿಳಿಸಿದರು.

ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಗುಟ್ಟಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಭಾರತದ ಅನೇಕ ಮಹಾವೀರರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರವನ್ನು ಪಡೆದುಕೊಂಡಿದ್ದು, ಕಳೆದ 78 ವರ್ಷಗಳಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಬಾಹ್ಯಾಕಾಶ ಪರಿಶೋಧನೆ, ತಂತ್ರಜ್ಞಾನ ಮೂಲಸೌಕರ್ಯ ಮತ್ತು ಕ್ರೀಡೆಗಳಲ್ಲಿ ನಮ್ಮ ದೇಶವು ಹಲವಾರು ಸಾಧನೆಗಳನ್ನು ಮಾಡಿದೆ” ಎಂದರು.

Advertisements

“ಈಗಿನ ಯುವಕರು ಪರಿಸರ ಸಂರಕ್ಷಣೆ, ಸಮುದಾಯ ಸೇವೆ ಮತ್ತು ಜವಾಬ್ದಾರಿಯುತ ಪೌರತ್ವದ ಕಡೆಗೆ ಗಮನಹರಿಸಬೇಕು. ಅನೇಕ ಮಹನೀಯರು ಸ್ವಾತಂತ್ರ್ಯವನ್ನು ಸಾಧಿಸಲು ತಮ್ಮ ಪ್ರಾಣವನ್ನೇ ಪಣಕಿಟ್ಟರು. ಅವರಂತೆ ನಾವೂ ಕೂಡ ದೇಶದ ಪ್ರಗತಿಗೆ ಒತ್ತು ನೀಡುವುದಾಗಿ, ಪರಿಸರವನ್ನು ರಕ್ಷಿಸುವುದಾಗಿ, ಕಾನೂನನ್ನು ಗೌರವಿಸುವುದಾಗಿ, ನಮ್ಮ ಸಹ ನಾಗರಿಕರಿಗೆ ಸಹಾಯ ಮಾಡುವುದಾಗಿ ಮತ್ತು ದೇಶದ ಜನರಿಗೆ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿ ಪ್ರತಿಜ್ಞೆ ಮಾಡೋಣ. ನಮ್ಮ ದೇಶವು ಮತ್ತಷ್ಟು ಎತ್ತರ ತಲುಪಲೆಂದು ಬಯಸೋಣ” ಎಂದು ಹಾರೈಸಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಗುಡಿ, ಮಸೀದಿ, ಚರ್ಚುಗಳ ಪ್ರಭಾವದಿಂದ ದೂರವಿರಬೇಕಾಗಿದೆ: ನ್ಯಾ. ಬಿ ಟಿ ವಿಶ್ವನಾಥ್

ಬೆಳ್ಳೂರಿನ ವಿಜಯಲಕ್ಷ್ಮಿ ಟ್ರಸ್ಟ್ ಸಂಸ್ಥಾಪಕಿ ವಿ ಜಯಲಕ್ಷ್ಮಿದೇವಿ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಹಾಗೂ ಬೆಳಮಾರನಹಳ್ಳಿ ಮಣಿಯವರು ಪರೀಕ್ಷಾ ಪ್ಯಾಡ್ ಮತ್ತು ಪೆನ್ನುಗಳನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಜಿ ವಿ ಗೋಪಾಲಕೃಷ್ಣ, ಉಪಾಧ್ಯಕ್ಷ ಸಂಗೀತ, ಸದಸ್ಯರಾದ ಈಶ್ವರಚಾರಿ, ಶೈಲಜಾ, ಗೀತಾ, ಪುಷ್ಪಲತಾ ರಾಮೇಗೌಡ, ಶಂಕರ್, ಬೈರೇಗೌಡ, ದೇವನಹಳ್ಳಿಯ ಜೆ ಎಂ ಎಫ್ ಸಿ ನ್ಯಾಯಾಲಯದ ಎಫ್ ಡಿ ಎ ಪುಷ್ಪಲತಾ. ಪಿ, ಗ್ರಾಪಂ ಸದಸ್ಯ ವೆಂಕಟೇಶ ಗೌಡ, ಶಿಕ್ಷಕಿ ಎಸ್ ನಿರ್ಮಲ, ಅಡುಗೆ ಸಿಬ್ಬಂದಿಗಳಾದ ಮಮತಾ ಮತ್ತು ಸುಮಾ, ಅಂಗನವಾಡಿ ಶಿಕ್ಷಕಿ ಶಶಿಯಮ್ಮ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನ್ನೆ ಹೊಸಹಳ್ಳಿ ರಮೇಶ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಉಡುಪಿ | ಬ್ರಹ್ಮಾವರ ಪೊಲೀಸ್ ಠಾಣೆಯ 500ಮೀ ವಾಪ್ತಿಯಲ್ಲಿ ಆ.22ರವರೆಗೆ ನಿಷೇಧಾಜ್ಞೆ: ಜಿಲ್ಲಾಧಿಕಾರಿ

ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 177/2025ಕ್ಕೆ ಸಂಬಂಧಿಸಿದಂತೆ ಸಕ್ರಿಯ ಹಿಂದೂ...

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

Download Eedina App Android / iOS

X