ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸೆ.22 ರಿಂದ ಅ.2ರವರೆಗೆ ನಡೆಯಲಿರುವ ʼದಸರಾ ದರ್ಬಾರ್ʼನಲ್ಲಿ ತೆರೆದ ವಾಹನದಲ್ಲಿ ಅಡ್ಡ ಪಲ್ಲಕ್ಕಿ ಮೆರವಣಿಗೆ ನಡೆಸುವುದಾಗಿ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಸ್ಪಷ್ಟಪಡಿಸಿದ್ದಾರೆ.
ʼಕಾರ್ಯಕ್ರಮದ ಗೌರವ ಅಧ್ಯಕ್ಷರೂ ಆಗಿರುವ ಹಾರಕೂಡ ಚನ್ನವೀರ ಶಿವಾಚಾರ್ಯರು ಭಕ್ತರ ಹೆಗಲ ಮೇಲೆ ಪಲ್ಲಕ್ಕಿ ಹೋರುವ ವಿಚಾರವನ್ನು ಒಪ್ಪದೆ ಕಾರ್ಯಕ್ರಮ ದಿಂದ ದೂರ ಉಳಿಯುವುದಾಗಿ ನಿರ್ಧಾರ ಪ್ರಕಟಿಸಿದ್ದರು. ಈ ಕಾರಣಕ್ಕೆ ಸ್ಪಷ್ಟೀಕರಣ ನೀಡಲಾಗುತ್ತಿದೆ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼವಿಜಯ ದಶಮಿ ದಿನದಂದು ತೆರೆದ ವಾಹನದಲ್ಲಿ ಅಡ್ಡಪಲ್ಲಕ್ಕಿ ಇಟ್ಟು ಮೆರವಣಿಗೆ ನಡೆಸಲಾಗುವುದು. ನಿಗದಿಪಡಿಸಿದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲಿವೆʼ ಎಂದು ಸ್ವಾಮೀಜಿ ಅವರು ತಿಳಿಸಿದ್ದಾರೆ.