ವಿಪಕ್ಷಗಳು ಮಾಡಿರುವ ಮತಗಳವು ಆರೋಪ ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗವು ದೇಶದ ಮತದಾರರರೊಂದಿಗೆ ದೃಢವಾಗಿ ನಿಂತಿದೆ. ಮತಗಳವು ಆರೋಪಗಳಿಗೆ ಹೆದರುವುದಿಲ್ಲ. ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಚುನಾವಣಾ ಸುಧಾರಣೆಯ ಭಾಗವಾಗಿದೆ. ಚುನಾವಣಾ ಆಯೋಗದ ಬಾಗಲು ಪ್ರತಿಯೊಬ್ಬರಿಗೂ ಮುಕ್ತವಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಏಜೆಂಟ್‌ಗಳು ಪಾರದರ್ಶಕ ರೀತಿಯಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?
ಚುನಾವಣಾ ಆಯೋಗ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡಿಲ್ಲ. ಇಲ್ಲಿ ಎಲ್ಲರು ಸಮಾನರು. ಉದ್ದೇಶಪೂರ್ವಕವಾಗಿ ಚುನಾವಣಾ ಆಯೋಗದ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಆಯೋಗದ ಪ್ರಮಾಣಿಕತೆಯನ್ನು ಯಾರೂ ಪ್ರಶ್ನಿಸಲಾಗದು ಎಂದು ಜ್ಞಾನೇಶ್ ಕುಮಾರ್ ಹೇಳಿದರು.
ಪಶ್ಚಿಮ ಬಂಗಾಳ ಹಾಗೂ ಇತರ ರಾಜ್ಯಗಳಲ್ಲಿ ನಡೆಯುವ ಎಸ್‌ಐಆರ್ ಪ್ರಕ್ರಿಯೆ ದಿನಾಂಕವನ್ನು ಕೇಂದ್ರದ ಮೂವರು ಚುನಾವಣಾ ಆಯುಕ್ತರು ಕೂಡಿ ನಿರ್ಧರಿಸಲಿದ್ದಾರೆ ಇದೇ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ
ಇದೇ ಸಂವಿಧಾನವು ಚುನಾವಣಾ ಆಯೋಗವು ನಿಸ್ಪಕ್ಸ ಕೆಲಸ ಮಾಡುವುದನ್ನು ಹೇಳುತ್ತಿದೆ ಆಯೋಗದ ಮೇಲೆ ದೇಶದ ಸಂಸತ್ತಿನ ವಿರೋಧ ಪಕ್ಷದ ನಾಯಕ ಆರೋಪ ಮಾಡಿರುವರು ಅಂದರೆ ಅವರಿಗೆ ಮನವರಿಕೆ ಆಗುವವರೆಗೆ ಉತ್ತರ ನೀಡುವುದು ಚುನಾವಣೆ ಆಯೋಗದ ಕರ್ತವ್ಯ ಪತ್ರಿಕಾ ಗೋಷ್ಠಿ ಮಾಡಿ ಜನರನ್ನು ಮರಳು ಮಾಡುವುದು ಆಯೋಗದ ಕೆಲಸವಲ್ಲ