ಶಿರಸಿ ಕಸ್ತೂರ ಬಾ ನಗರ ಪ್ರದೇಶದ ಎಂಟನೇ ತರಗತಿಯ ಓರ್ವ ವಿದ್ಯಾರ್ಥಿನಿ ಹಾಗೂ ಆರನೇ ತರಗತಿಯ ಇನ್ನೋರ್ವ ವಿದ್ಯಾರ್ಥಿನಿ ಮನೆಗೆ ʼಚಿತ್ರಕಲೆ ಕ್ಲಾಸ್‌ಗೆ ಹೋಗಿ ಬರುತ್ತೇವೆʼ ಎಂದು ಹೇಳಿ ಹೊರಟ ಬಳಿಕ ಮನೆಗೆ ವಾಪಸ್ ಬಾರದೆ ಕಾಣೆಯಾಗಿದ್ದಾರೆ.
ಈ ಕುರಿತು ಮಾಹಿತಿ ಬಂದ ಕೂಡಲೇ ಮಾರ್ಕೆಟ್ ಪೊಲೀಸ್ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಶಶಿಕಾಂತ್ ವರ್ಮಾ ನೇತೃತ್ವದಲ್ಲಿ ಪಿಎಸ್‌ಐ ರತ್ನಾಕುರಿ ಹಾಗೂ ಪೊಲೀಸ್ ಸಿಬ್ಬಂದಿಗಳು ಬಾಲಕಿಯರ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಲ್ಹಾರ | ಬಾಧಿತ ಗ್ರಾಮಗಳ ಬೇಡಿಕೆ ಈಡೇರಿಸುವಂತೆ ಕರವೇ ಆಗ್ರಹ
ಕಾಣೆಯಾಗಿರುವ ಬಾಲಕಿಯರ ಸುದ್ದಿ ಹಾಗೂ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಬಾಲಕಿಯರು ಶೀಘ್ರದಲ್ಲೇ ಸುರಕ್ಷಿತವಾಗಿ ಮನೆಗೆ ಮರಳಲೆಂದು ಎಲ್ಲರೂ ಹಾರೈಸುತ್ತಿದ್ದಾರೆ.