ಮನೆ ಕಳ್ಳತನಗಳು ಹಾಗೂ ಎಪಿಎಂಸಿ ಆವರಣದ ತೆಂಗಿನಕಾಯಿ ಕಳ್ಳತನ ಪ್ರಕರಣ ಕುರಿತು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಮಾರ್ಚ್ 19ರಂದು ಮಂಜುಳ ಎಂಬುವರ ಮನೆಯಲ್ಲಿ 43 ಗ್ರಾಂ ಚಿನ್ನಾಭರಣ ಮತ್ತು ₹10 ಸಾವಿರ ನಗದು ಹಾಗೂ ಜುಲೈ 1ರಂದು ಪಾರ್ವತಮ್ಮ ಅವರ ಮನೆಯಿಂದ 51 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಹಾಗೂ ₹6 ಸಾವಿರ ನಗದು ಕಳವಾಗಿದ್ದ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಬಂಧಿತ ಆರೋಪಿ ಸಚಿನ್ ಡಿಸೋಜನಿಂದ 71 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ, ₹25 ಸಾವಿರ ಮೌಲ್ಯದ ವಸ್ತುಗಳು ಹಾಗೂ ಕಳವು ಮಾಡಲು ಬಳಸಿದ ಬಜಾಜ್ ಪಲ್ಸರ್ ಬೈಕ್ ವಶ, ಒಟ್ಟು ₹7.25 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಪಿಎಂಸಿ ಆವರಣದಲ್ಲಿ ಕಳೆದ 3 ತಿಂಗಳ ಅವಧಿಯಲ್ಲಿ 34 ಚೀಲಗಳಲ್ಲಿ ಒಟ್ಟು 2,500 ತೆಂಗಿನಕಾಯಿಗಳನ್ನು ಕಳವು ಮಾಡಿದ್ದ ಮಹಮ್ಮದ್ ನೌಷದ್, ಹಾಗೂ ಗಣೇಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ₹1.10 ಲಕ್ಷ ಮೌಲ್ಯದ ನಗದು ಹಾಗೂ ₹2 ಲಕ್ಷ ಮೌಲ್ಯದ ಬಜಾಜ್ ಮಾಕ್ಸಿಮಾ ಆಟೋವನ್ನು ವಶ ಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪೊಲೀಸ್ ದೌರ್ಜನ್ಯದಿಂದ ಯುವಕ ಆತ್ಮಹತ್ಯೆ: ನ್ಯಾಯ ಸಿಗದಿದ್ದರೇ ಬೃಹತ್ ಪ್ರತಿಭಟನೆ; ದಸಂಸ ಎಚ್ಚರಿಕೆ
ಈ ಘಟನೆ ಕುರಿತು ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಳ್ಳಲಾಗಿದೆ.