ಗದಗ | ಅರ್ಹ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು ದೊರೆಯಬೇಕು: ಬಾಲು ರಾಠೋಡ

Date:

Advertisements

“ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಸಾಮಾಜಿಕ ಭದ್ರತೆ ಅಡಿಯಲ್ಲಿ ಮಂಡಳಿ ರಚನೆ ಮಾಡಬೇಕು. ನಿಜವಾದ  ಅರ್ಹ ಕಟ್ಟಡ  ಕಾರ್ಮಿಕರಿಗೆ ಸೌಲಭ್ಯಗಳು ದೊರಯಬೇಕು” ಎಂದು ಸಮಾವೇಶ ಉದ್ಘಾಟಿಸಿದ ಕೃಷಿ ಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಶಾದಿ ಮಹಲ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿ.ಐ.ಟಿ.ಯು.) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ತಾಲ್ಲೂಕು ಕಟ್ಟಡ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು.

“ಅನಕ್ಷರಸ್ಥ ಕಾರ್ಮಿಕರು ಅರ್ಜಿ ಸಲ್ಲಿಸುವಾಗ ಸಣ್ಣಪುಟ್ಟ ದೋಷಗಳ ಆಗಬಹುದು. ಆ ದೋಷಗಳನ್ನು ಸರಿಪಡಿಸುವ ಅವಕಾಶ ನೀಡದೆ ಅರ್ಜಿಗಳನ್ನು ವಜಾ ಮಾಡಲಾಗುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ನಿಜವಾದ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸೌಲಭ್ಯಗಳನ್ನು ತಲುಪಿಸಬೇಕು” ಎಂದು ಒತ್ತಾಯಿಸಿದರು.

Advertisements

ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, “ಇಂದು ರೈತರ ಭೂಮಿ, ವಸತಿ, ಬೆಂಬಲ ಬೆಲೆಗಾಗಿ ಮತ್ತು ಕಾರ್ಮಿಕರ ಕೆಲಸದ ಭದ್ರತೆಯನ್ನು ಕಾಪಾಡಲು ಬಲಿಷ್ಠ ಚಳುವಳಿ ಕಟ್ಟಬೇಕಿದೆ. ಕಾರ್ಮಿಕರು ಸಂಘಟನೆ ಜೊತೆಗೂಡಿ ತಿಳುವಳಿಕೆ ಪಡೆದು ಹೆಚ್ಚಿನ ಸೌಲಭ್ಯಗಳನ್ನು ಪಡೆಯಬೇಕು. ರೈತ-ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ ಆದ್ಯತೆಯಲ್ಲಿ ಪರಿಹರಿಸಬೇಕು. ಇದರಿಂದ ದೇಶ ಅಬಿವೃದ್ಧಿಯಾಗುತ್ತದೆ” ಎಂದರು.

ಸಿ.ಐ.ಟಿ.ಯು ತಾಲ್ಲೂಕು ಸಂಚಾಲಕ ಮೈಬು ಹವಾಲ್ದಾರ್ ಮಾತನಾಡಿ, “ಜಾತಿ, ಧರ್ಮ ಭಾವನಾತ್ಮಕ ವಿಷಯಗಳಿಗಿಂತ ಜನರ ಸಮಸ್ಯೆಗಗಳಿಗೆ ಪರಿಹಾರ ಪಡೆದುಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಕಾನೂನಾತ್ಮಕ ಹೋರಾಟ ನಡೆಸಬೇಕು” ಎಂದರು.

ಸಮಾವೇಶದಲ್ಲಿ 21 ಜನರ ನೂತನ ತಾಲೂಕು ಸಮಿತಿ ರಚನೆಗೊಂಡಿತು. ಅಧ್ಯಕ್ಷರಾಗಿ  ಅಂದಪ್ಪ ಕುರಿ, ಕಾರ್ಯದರ್ಶಿಯಾಗಿ ಪೀರು ರಾಠೋಡ, ಖಜಾಂಚಿಯಾಗಿ ಮೆಹಬೂಬ್ ಹವಾಲ್ದಾರ್ ಮರು ಆಯ್ಕೆಗೊಂಡರು. ಇನ್ನುಳಿದಂತೆ 18 ಜನ ಸದಸ್ಯರು ತಾಲೂಕು ಸಮಿತಿಗೆ ಸರ್ವಾನುಮತದಿಂದ ಆಯ್ಕೆಗೊಂಡರು.

ಈ ಸುದ್ದಿ ಓದಿದ್ದೀರಾ? ಗದಗ | ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಶ್ರೀರಾಮ ಸೇನೆ

ಸಮಾವೇಶದಲ್ಲಿ ಕಟ್ಟಡ ಕಾರ್ಮಿಕರ ತಾಲೂಕಿನ ಅಧ್ಯಕ್ಷ ಅಂದಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮುಖಂಡರು ಹನುಮಂತಪ್ಪ ಮಾದರ, ಮುಖಂಡರು ಅಂದಪ್ಪ ರಾಠೋಡ, ರೇವಣಪ್ಪ ರಾಠೋಡ, ಕನಕರಾಯ ಮಾದರ, ಶಂಕ್ರಪ್ಪ ಹೊಸಮನಿ, ಹನುಮಂತಪ್ಪ ಮಾದರ, ರುದ್ರಪ್ಪ ರಾಠೋಡ, ಶರಣಪ್ಪ ಬಂಡಿವಡ್ಡರ, ಈರಪ್ಪ ಬಂಡಿವಡ್ಡರ, ಸಂತೋಷ ಕುಮಾರ್,  ಎಸ್ ಎಫ್ ಐ ತಾಲೂಕು ಅಧ್ಯಕ್ಷ ಅನಿಲ ರಾಠೋಡ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X