ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ವಿಜಯಕುಮಾರ ಗಣಪತಿ ಗೋಡಬೋಲೆ (54) ಹಾಗೂ ಅನೀಲ ರಮೇಶ ಬಿರಾದಾರ (21) ಮೃತ ದುರ್ದೈವಿಗಳು. ಸ್ಕೂಟಿಯಲ್ಲಿ ಚಲಿಸುತ್ತಿದ್ದ ವಿಜಯಕುಮಾರ್ ಅವರಿಗೆ ಗುಲ್ಬರ್ಗ ಮೂಲದ ಟಾಟಾ ಎಸ್ ಡಿಕ್ಕಿ ಅನೀಲ್ ಎಂಬಾತ ಚಲಾಯಿಸುತ್ತಿದ್ದ ವಾಹನ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ರಾಮದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.