ಕೊಪ್ಪಳ ನಗರದಲ್ಲಿ ಪ್ರೀತಿ ವಿಚಾರವಾಗಿ ಕೊಲೆಯಾದ ಗವಿಸಿದ್ದಪ್ಪ ನಾಯಕ್ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮೃತ ಗವಿಸಿದ್ದಪ್ಪ ಅಪ್ರಾಪ್ತ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಫೋನ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಇದಕ್ಕೆ ಅವರ ತಾಯಿ-ತಂದೆ ಹಾಗೂ ಸಹೋದರಿಯರು ಸಹಕರಿಸಿದ್ದರೆಂದು ಸಂತ್ರಸ್ತ ಹುಡುಗಿಯ ತಾಯಿ ಹಸೀನಾ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಲದಿನಗಳ ಹಿಂದೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತಿದ್ದು, “ಮೃತ ಗವಿಸಿದ್ದಪ್ಪ ನನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿರುತ್ತಾನೆ. ಇದಕ್ಕೆ ಅವರ ತಾಯಿ-ತಂದೆ ಹಾಗೂ ಸಹೋದರಿಯರು ಸಹಕಾರ ನೀಡಿರುತ್ತಾರೆ. ನಮಗೆ ನ್ಯಾಯ ಕೊಡಿಸಿ” ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಮೀನಿನಲ್ಲಿ ಗೊಬ್ಬರ ಹಾಕುವಾಗ ಚಿರತೆ ದಾಳಿ, ಮಹಿಳೆ ಪ್ರಾಣಾಪಾಯಾದಿಂದ ಪಾರು
ಸಂತ್ರಸ್ತ ಬಾಲಕಿ ತಾಯಿಯ ದೂರಿನನ್ವಯ ಮೃತ ಗವಿಸಿದ್ದಪ್ಪ, ತಾಯಿ-ತಂದೆ ಹಾಗೂ ಸಹೋದರಿಯರ ವಿರುದ್ಧ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.