ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿದ ಪರಿಣಾಮ ಕೆಲವು ಭಾಗಗಳಲ್ಲಿ ನೆರೆ ಬಂದಿದೆ. ಹಾಗೆಯೇ, ಮಳೆಯಿಂದ ಶೃಂಗೇರಿ ತಾಲೂಕಿನ ಗಾಂಧಿ ಮೈದಾನ, ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ವಿದ್ಯಾರಣ್ಯಪುರ ರಸ್ತೆ, ಕಿಕ್ರೆ ಹಳ್ಳ ಸೇತುವೆ ಮೇಲೆ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆ ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ.

ತಾಲ್ಲೂಕಿನ 49 ಗ್ರಾಮಗಳಲ್ಲಿ ಶಿರ್ಲು, ಹಾದಿ, ಕೆರೆ, ಸುಂಕದಮಕ್ಕಿ, ನಿಲಂದೂರು, ಕುಂಬ್ರಗೋಡು, ಕೂಗೋಡು ಮೊದಲಾದ ಗ್ರಾಮಗಳು ಪಟ್ಟಣದಿಂದ 25 ರಿಂದ 30 ಕಿಲೋಮೀಟರ್ ದೂರವಿದ್ದು, ಇಲ್ಲಿನ ರಸ್ತೆಗಳು ಹದಗೆಟ್ಟಿರುವುದರಿಂದ ಅನಾರೋಗ್ಯ, ಅಪಘಾತ ಸಂಭವಿಸಿದರೆ ಆಸ್ಪತ್ರೆಗೆ ಬರಲು ಅಲ್ಲಿನ ಜನ ಹರಸಾಹಸ ಪಡಬೇಕಿದೆ.

ಶೃಂಗೇರಿಯಲ್ಲಿ 132 ಮಿ.ಮೀ, ಕಿಗ್ಗಾದಲ್ಲಿ 152.8 ಮಿ.ಮೀ, ಕೆರೆಕಟ್ಟೆ 154 ಮಿ.ಮೀ ಮಳೆಯಾಗಿದೆ. 2 3,475 ಒಟ್ಟು 3,475 ಮಿ.ಮೀ ಮಳೆಯಾಗಿದೆ. ಈ ಭೀಕರ ಮಳೆಯಿಂದ ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರಲ್ಲಿ ರಸ್ತೆ ಜಲಾವೃತಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಶೃಂಗೇರಿಯ ಭಾರತೀತೀರ್ಥ ರಸ್ತೆ ನೀರಿನಿಂದ ಆವೃತಗೊಂಡಿದೆ. ಕುರುಬಕೇರಿ ರಸ್ತೆ ನೀರಿನಿಂದ ಆವೃತಗೊಂಡು ರಸ್ತೆಯ 2 ಕಡೆ ನೀರಿನಿಂದ ತುಂಬಿದ್ದು ಮಧ್ಯೆ ದ್ವೀಪದಂತಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮಲೆನಾಡಿನಲ್ಲಿ ಕಾಡಾನೆ ಹಾವಳಿ: ಜನರಲ್ಲಿ ಭಯದ ವಾತಾವರಣ
ಅತಿಯಾದ ಮಳೆಯ ಕಾರಣ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶಾಲಾ ಸೋಮವಾರ(ಆ.18) ರಜಾ ಘೋಷಿಸಲಾಗಿದೆ. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಸಾರ್ವಜನಿಕರು ಹೆಚ್ಚರದಿಂದ ಇರಬೇಕಾಗುತ್ತದೆ. ಹಾಗೆಯೇ, ವಾಹನ ಸವಾರರು ಸುರಕ್ಷತೆಯಿಂದ ಪ್ರಯಾಣ ಮಾಡಬೇಕಿದೆ.

ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಮರ ಧರೆಗೆ ಉರುಳುವುದು, ಮನೆ ಕುಸಿಯುವುದು, ರಸ್ತೆ ಕುಸಿತ ಹಾಗೂ ಅನೇಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಯಾರು ಆತಂಕ ಪಡಬಾರದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.