ಮೃತ ಜನರು ಕರಡು ಪಟ್ಟಿಯಲ್ಲಿರಲು ಮತ್ತು ಜೀವಂತ ಜನರು ಅಳಿಸಲಾದ ಪಟ್ಟಿಯಲ್ಲಿರಲು ಹೇಗೆ ಸಾಧ್ಯ ಎಂದು ಟಿಎಂಸಿಯ ಸಂಸದೆ ಮಹುವಾ ಮೊಯಿತ್ರಾ ಪ್ರಶ್ನಿಸಿದರು.
ನವದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಇಂಡಿಯಾ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
“ಕರಡು ಪಟ್ಟಿಯಲ್ಲಿ ಸತ್ತವರು ಹೇಗೆ ಇರಬಹುದು ಮತ್ತು ಜೀವಂತ ಜನರನ್ನು ಅಳಿಸಲಾದ ಪಟ್ಟಿಯಲ್ಲಿ ಹೇಗೆ ಸೇರಿಸಬಹುದು? ಸತ್ತ ವ್ಯಕ್ತಿ ಕರಡು ಪಟ್ಟಿಯಲ್ಲಿ ಹೇಗೆ ಇರಬಹುದು? ಇದು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ತಾವೇ ಅರ್ಜಿಗಳನ್ನು ಸಹಿ ಮಾಡುತ್ತಿದ್ದರಿಂದ ಮಾತ್ರ ಸಾಧ್ಯವಾಗಿದೆ. ಬಿಹಾರದ ಎರಡು ಜಿಲ್ಲೆಗಳಾದ ದರ್ಭಂಗಾ ಮತ್ತು ಕೈಮುರ್‌ನಲ್ಲಿ ಬಿಎಲ್‌ಒಗಳು ಶೇ. 10 ರಿಂದ 12 ಪ್ರತಿಶತದಷ್ಟು ‘ಶಿಫಾರಸ್ಸು ಮಾಡಲಾಗಿಲ್ಲ’ ಎಂದು ಗುರುತಿಸಿದ್ದಾರೆ ಎಂದು ಎಸ್‌ಐಆರ್ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೌಜನ್ಯ ಕೇಸ್‌ನಲ್ಲಿ ಮತ್ತೆಮತ್ತೆ ಸಂತೋಷ್ ರಾವ್‌ನನ್ನು ಎಳೆತಂದು ಯಾರನ್ನು ರಕ್ಷಿಸಲಾಗುತ್ತಿದೆ?
ಇದನ್ನು ಸಂಪೂರ್ಣ ಬಿಹಾರಕ್ಕೆ ಸರಾಸರಿ ಮಾಡಿದರೆ, 80 ಲಕ್ಷ ಜನರನ್ನು ‘ಶಿಫಾರಸ್ಸು ಮಾಡಲಾಗಿಲ್ಲ’ ಎಂದಾಗುತ್ತದೆ. ಚುನಾವಣಾ ಆಯುಕ್ತರು ಉಲ್ಲೇಖಿಸಿದ ಕೇವಲ ಐದು ಅಂಶಗಳ ಆಧಾರದಲ್ಲಿ ಇದು ಸಂಪೂರ್ಣ ಹಾಸ್ಯಾಸ್ಪದವಾಗಿದೆ. ಮುಖ್ಯ ಚುನಾವಣಾ ಆಯುಕ್ತರ ಕೆಲಸ ವಿರೋಧ ಪಕ್ಷವನ್ನು ದಾಳಿ ಮಾಡುವುದಲ್ಲ, ವಿರೋಧ ಪಕ್ಷದಿಂದ ಎತ್ತಲ್ಪಟ್ಟ ಮಾನ್ಯ ಪ್ರಶ್ನೆಗಳ ಬಗ್ಗೆ ವಿವರವಾಗಿ ಪರಿಶೀಲಿಸಿ ಉತ್ತರ ನೀಡುವುದು ಎಂದು ಮಹುವಾ ಮೊಯಿತ್ರಾ ಹೇಳಿದರು.
VIDEO | Delhi: "How is it possible that dead people are in the draft list and living people are on the deleted list? How can a dead person be on a draft list? It can only happen because the BLOs were signing the form themselves…In just two districts of Bihar – Darbhanga and… pic.twitter.com/cyYbG6ZcVE
— Press Trust of India (@PTI_News) August 18, 2025