ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ನೇಸರಿ ಡೆಲಕ್ಸ್‌ನಲ್ಲಿ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು.
ಅವರು ಹೇಳಿದರು: “ಹುಕ್ಕೇರಿ ಕ್ಷೇತ್ರದ ಅಭಿವೃದ್ಧಿ ಆಗಬೇಕಾದರೆ ರಮೇಶ್ ಕತ್ತಿ ಅವರ ವಿರುದ್ಧ ಚುನಾವಣೆಗೆ ನಿಲ್ಲಲೇಬೇಕು. ಅಭಿವೃದ್ಧಿಗಾಗಿ ಒಳ್ಳೆಯ ಕೆಲಸ ಮಾಡುವವರಿಗೆ ನೀವು ಸಹಕಾರ ನೀಡಬೇಕು. ನಾವು ಹೊರಗಡೆಯವರು ಅಲ್ಲ, ಇದೇ ನೆಲದಲ್ಲಿ ಬೆಳೆಯುತ್ತಿದ್ದೇವೆ” ಎಂದು ಸ್ಪಷ್ಟನೆ ನೀಡಿದರು.
ರಮೇಶ್ ಕತ್ತಿ ಅವರು “ಹೊರಗಡೆಯವರಿಗೆ ಅವಕಾಶ ಕೊಡೋದಿಲ್ಲ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, “ಮೊದಲು ಬೆಳಗ್ಗೆ 6 ಗಂಟೆಗೆ ಏಳಲು ಕಲಿಯಿರಿ. ನೀವು ಎದ್ದೇಳುವ ಮುಂಚೆ ನಾವು ಬಂದು ಕೆಲಸ ಮುಗಿಸಿಕೊಂಡು ಹೋಗಿರುತ್ತೇವೆ” ಎಂದು ಟೀಕಿಸಿದರು.
ಹುಕ್ಕೇರಿ ಕ್ಷೇತ್ರದಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬಗಳ ರಾಜಕೀಯ ಪೈಪೋಟಿ ಮತ್ತಷ್ಟು ತೀವ್ರಗೊಂಡಿದೆ.