ಇತ್ತೀಚೆಗೆ ನಡೆದ ಏಷ್ಯನ್ ಸರ್ಫಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಭಾರತದ ಪ್ರಪ್ರಥಮ ಸರ್ಫರ್, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮುರುಡಿ ತಾಂಡಾದ ಯುವಕ ರಮೇಶ್ ಬೂದಿಹಾಳ ಅವರು ಸೋಮವಾರ ಸಿಎಂ ಭೇಟಿಯಾದರು.
ಕರ್ನಾಟಕ ರಾಜ್ಯ ಹಾಗೂ ಗದಗ ಜಿಲ್ಲೆಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಕಾರಣರಾದ ಯುವಕ ರಮೇಶ್ ಬೂದಿಹಾಳ ಇವರನ್ನು ಮುಖ್ಯಮಂತ್ರಿ ಗಳಾದ ಶ್ರೀ ಸಿದ್ದರಾಮಯ್ಯ ಅವರು ಸನ್ಮಾನಿಸಿ ಗೌರವಿಸಿದರು. ಇವರ ಸಾಧನೆಯ ತುತ್ತತುದಿಗೇರಲಿ, ಭವಿಷ್ಯವು ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಲಕ್ಷ್ಮೇಶ್ವರ ರಸ್ತೆಯುದ್ಧಕ್ಕೂ ನೂರಾರು ತಗ್ಗು ಗುಂಡಿಗಳು: ರಸ್ತೆ ಅಭಿವೃದ್ಧಿಪಡಿಸಲು ಸಾರ್ವಜನಿಕರು ಒತ್ತಾಯ
ಈ ಸಂದರ್ಬದಲ್ಲಿ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.