ಗಾಝಾದ ಮೇಲೆ ಇಸ್ರೇಲ್ ದಾಳಿ ಕೊನೆಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಪ್ರಸ್ತಾಪದ ಬಗ್ಗೆ ಚರ್ಚಿಸಲು ಒಪ್ಪಿಕೊಂಡಿರುವುದಾಗಿ ಹಮಾಸ್ ಹೇಳಿದೆ. ಗಾಝಾ, ಇಸ್ರೇಲ್ ಯುದ್ಧದಲ್ಲಿ ಈಗಾಗಲೇ 62 ಸಾವಿರಕ್ಕೂ ಅಧಿಕ ಪ್ಯಾಲೇಸ್ತಿನಿಯನ್ನರು ಬಲಿಯಾಗಿದ್ದಾರೆ. ಗಾಝಾದಲ್ಲಿ ಕದನ ವಿರಾಮಕ್ಕೆ ಹೊಸ ಪ್ರಸ್ತಾಪವನ್ನು ಈಜಿಪ್ಟ್‌ನಲ್ಲಿರುವ ಹಮಾಸ್ ಪ್ರತಿನಿಧಿಗಳು ಪಡೆದಿದ್ದಾರೆ ಎಂದು ವರದಿಯಾಗಿದೆ. 60 ದಿನಗಳವರೆಗೆ ಮಿಲಿಟರಿ ಕಾರ್ಯಾಚರಣೆಗಳ ತಾತ್ಕಾಲಿಕ ಸ್ಥಗಿತದ ಪ್ರಸ್ತಾಪ ಇದಾಗಿದೆ. ಇದೇ ವೇಳೆಯಲ್ಲಿ ಪ್ಯಾಲೇಸ್ತಿನಿಯನ್ನರ ಬದಲಿಗೆ 50 ಇಸ್ರೇಲಿ ಸೆರೆಯಾಳುಗಳಲ್ಲಿ ಅರ್ಧದಷ್ಟು ಜನರನ್ನು ಹಸ್ತಾಂತರ ಮಾಡಲಾಗುವುದು ಎಂದು ವರದಿಯಾಗಿದೆ.
