ಲಿಂಗಸೂಗೂರು ತಾಲ್ಲೂಕಿನ ಗುರುಗುಂಟ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆರಿಸಬಾರದು ಎಂದು ರಾಜ್ಯ ರೈತ ಹಸಿರು ಸೇನೆ ನೇತೃತ್ವದಲ್ಲಿ ಗ್ರಾಮದ ಗ್ರಾಮಸ್ಥರು ಕೂಲಿ ಸಾಮಗ್ರಿಗಳು ಹಿಡಿದು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಗುರುಗುಂಟ ಗ್ರಾಮವು ಹೋಬಳಿ ಗ್ರಾಮವಾಗಿದ್ದು, ಸುಮಾರು 60 ರಿಂದ 70 ರವರೆಗೆ ದೊಡ್ಡಿಗಳು ಬರುತ್ತವೆ. ಇಲ್ಲಿ ವಾಸಿಸುವ ಜನರು ವ್ಯವಸಾಯ, ಉದ್ಯೋಗ ಖಾತ್ರಿ ನಂಬಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಗ್ರಾಮವನ್ನು ಪಟ್ಟಣ ಪಂಚಾಯತ್ ಮೇಲ್ದರ್ಜೆಗೆ ಸೇರಿಸಿದರೆ ಗ್ರಾಮೀಣ ಕೃಪಾಂಕದಿಂದ ಗ್ರಾಮಸ್ಥರು ವಂಚಿತರಾಗುತ್ತಾರೆ ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯತ್ ಆದ್ರೆ ತೆರಿಗೆ, ವಿದ್ಯುತ್, ನೀರಿನ ಬಿಲ್‌ಗಳು ಹೆಚ್ಚಾಗುತ್ತವೆ. ನಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಭಾರವಾಗಲಿದೆ. ಉದ್ಯೋಗ ಸಿಗದೇ ಮಹಾನಗರಗಳಿಗೆ ಗುಳೆ ಹೋಗುತ್ತಾರೆ. ಗ್ರಾಮೀಣ ಭಾಗದಲ್ಲಿ ಮನೆಯ ಕರ(ತೆರಿಗೆ) 5.5 ರಷ್ಟು ಇದ್ದು ಪಟ್ಟಣಕ್ಕೆ 7.7 ರಷ್ಟು ಹೆಚ್ಚಿರುತ್ತದೆ. ಹೀಗಾಗಿ ಪಟ್ಟಣ ಪಂಚಾಯಿಯಾಗಿ ಮೇಲ್ದರ್ಜೆಗೆ ಸೇರಿಸಬಾರದು ಎಂದು ಒತ್ತಾಯಿಸಿದರು.

ಪ್ರಭಾವಿ ನಾಯಕರ ಒತ್ತಡಕ್ಕೆ ಮಣಿದು ಮೇಲ್ದರ್ಜೆಗೆ ಏರಿಸಿದರೆ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶೀಲಹಳ್ಳಿ ಸೇತುವೆ ಮುಳುಗಡೆ : ನಾಲ್ಕು ಗ್ರಾಮಕ್ಕೆ ಸಂಪರ್ಕ ಕಡಿತ
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ದುರ್ಗಪ್ರಸಾದ್, ಉಪಾಧ್ಯಕ್ಷ ಆನಂದ್ ಕುಂಬಾರ್, ಶಿವಪ್ಪ ನಾಯಕ, ಶರಣೋಜಿ ಪವಾರ್, ಲಾಲ್ ಸಾಬ್, ಹನುಮಂತ, ಮತ್ತಿತರರು ಇದ್ದರು.

