“ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ ಹೈಕಮಾಂಡ್ ಕೋಪಕ್ಕೆ ಗುರಿಯಾಗಿದ್ದ ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ನಾಗೇಂದ್ರ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ” ಎಂದು ದಾವಣಗೆರೆ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಒತ್ತಾಯಿಸಿದರು.
ದಾವಣಗೆರೆ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಜಿ ಎಂ ಗಂಗಾಧರ ಸ್ವಾಮಿಯವರ ಮುಖಾಂತರ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಿ ವೀರಣ್ಣ ಮಾತನಾಡಿ ಕೆ.ಎನ್. ರಾಜಣ್ಣ ಹಾಗೂ ನಾಗೇಂದ್ರ ಅವರನ್ನು ಮನಃ ಸಂಪುಟಕ್ಕೆ ಸೇರಿಸಿಕೊಳ್ಳಲು ದಾವಣಗೆರೆ ಜಿಲ್ಲಾ ವಾಲ್ಮೀಕಿ ಸಮಾಜ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ. ಶೇ.100 ರಷ್ಟು ವಾಲ್ಮೀಕಿ ನಾಯಕ ಸಮುದಾಯವು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದರಿಂದ 15 ಪರಿಶಿಷ್ಟ ಪಂಗಡದ
ಮೀಸಲು ಕ್ಷೇತ್ರಗಳಲ್ಲಿ 14 ಜನ ಅಭ್ಯರ್ಥಿಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ 2
ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಚುನಾವಣಿಯಲ್ಲಿ ಆಯ್ಕೆಯಾಗಿರುತ್ತಾರೆ” ಎಂದು ಎಚ್ಚರಿಸಿದರು.

“ಅಲ್ಲದೇ ಒಂದು ‘ಸಾಮಾನ್ಯ ಕ್ಷೇತ್ರದಿಂದ ಎಸ್.ಟಿ. ಅಭ್ಯರ್ಥಿ ಚುನಾಯಿತರಾಗಿದ್ದು, 2 ವಿಧಾನ
ಪರಿಷತ್ ಸ್ಥಾನಗಳಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಎಸ್.ಟಿ. ಅಭ್ಯರ್ಥಿಗಳು ಚುನಾಯಿತರಾಗಿ
ರಾಜ್ಯದಲ್ಲಿ ಸಂಪೂರ್ಣವಾಗಿ ವಾಲ್ಮೀಕಿ ಜನಾಂಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರಿಂದ
ಕಾಂಗ್ರೆಸ್ ಪಕ್ಷದಿಂದ 140 ಶಾಸಕರು ಆಯ್ಕೆಯಾಗುವಲ್ಲಿ ಸಮಾಜವು ಸಹಕರಿಸಿದೆ. ಹೀಗಿದ್ದರೂ ಸಹ ಮೊದಲಿಗೆ ನಾಗೇಂದ್ರರವರನ್ನು ಸಂಪುಟದಿಂದ ಕೈಬಿಡಲಾಗಿದೆ. ನಂತರ ಕೆ.ಎನ್. ರಾಜಣ್ಣನವರನ್ನು ಕ್ಷುಲ್ಲಕ ಕಾರಣಕ್ಕೆ ಮಂತ್ರಿ ಮಂಡಲದಿಂದ ಕೈಬಿಟ್ಟರುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕೂಡಲೇ ಕೆ ಎನ್ ರಾಜಣ್ಣ ಮತ್ತು ನಾಗೇಂದ್ರ ಅವರನ್ನು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷರಾದ. ಹಿರಿಯ ವಕೀಲರಾದ ಎನ್ ಎಂ ಆಂಜನೇಯ ಮಾತನಾಡಿ “ಈ ಮೊದಲು ಶ್ರೀರಾಮುಲು ಅವರನ್ನು ಬಿ.ಜೆ.ಪಿ. ಉಪಮುಖ್ಯಮಂತ್ರಿ ಮಾಡುತ್ತದೆ ಎಂದು ಭರವಸೆ ನೀಡಿದ್ದರಿಂದ ಆ ಪಕ್ಷವು ಆಡಳಿತಕ್ಕೆ ಬಂದಿದ್ದು. ಆ ಸಂದರ್ಭದಲ್ಲಿ ರಮೇಶ್ ಜಾರಕಿ ಹೊಳಿಯವರಿಗೆ ತೊಂದರೆ ನೀಡಿ ಸಂಪುಟದಿಂದ ಕೈ ಬಿಟ್ಟಿತ್ತು. ಶ್ರೀರಾಮುಲು ಅವರನ್ನು ಕೊನೆಯ ವರೆಗೂ ಉಪಮುಖ್ಯಮಂತ್ರಿ ಮಾಡಲಿಲ್ಲ. ಈ ಕೂಡಲೇ ಸಮುದಾಯದ ಕೆ ಎನ್ ರಾಜಣ್ಣ ಹಾಗೂ ನಾಗೇಂದ್ರ ಈರ್ವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಉಗ್ರವಾದ ಪ್ರತಿಭಟನೆ ಮಾಡಲಾಗುವುದು. ಇದು ನಮ್ಮ ಸಮಾಜಕ್ಕೆ ಮಾಡಿದ ದ್ರೋಹ ಹಾಗೂ ವಂಚನೆಯಾಗಿದೆ”ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗದಲ್ಲಿ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ: ಕುರಿಗಾಹಿಯಿಂದ ಧ್ವಜಾರೋಹಣ
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ಯಾಗಲೆ ಕೆ ಆರ್ ಮಂಜುನಾಥ್, ಮುದೇಗೌಡ್ರು ಗಿರೀಶ್, ಗುಮ್ಮನೂರು ಶಂಬಣ್ಣ, ಎಸ್ ಕೆ ಸ್ವಾಮಿ, ವಕೀಲರಾದ ಕೆ.ಕೆ ರಂಗಸ್ವಾಮಿ, ದೇವರ ಬೆಳಕೆರೆ ಪೈಲ್ವಾನ್ ಮಹೇಶ್ವರಪ್ಪ, ಎಂಬಿಕೇರಿ ನರಸಿಂಹರಾಜು, ಸಿರಿಗೆರೆ ರಂಗಪ್ಪ, ಕಂಪ್ಲೇಶ, ಬಾಳಪ್ಪ, ಸುರೇಶ್ ಬಾಬು, ಕೊಡಗನೂರು ಸತೀಶ್ ಸೇರಿದಂತೆ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.