ಮೈಸೂರಿನಲ್ಲಿ ಭಾರತ ಜೆಎಸ್‌ಎಸ್ ಎಹೆಚ್‌ಇಆರ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ವೊಲ್ವರ್‌ಹ್ಯಾಂಪ್ಸನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಡಿಜಿಟಲ್ ಆರೋಗ್ಯ ತಂತ್ರಗಳ ಕುರಿತಾಗಿ ‘ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ‘ ಎಂಬ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ಜೆಎಸ್‌ಎಸ್ ಎಹೆಚ್‌ಇಆರ್ – ವೊಲ್ವರ್‌ಹ್ಯಾಂಪ್ಸನ್ ಪ್ಯೂಚರ್ ಹೆಲ್ತ್ಕೇರ್, ಪಾಲಿಸಿ ಇನ್ನೋವೇಶನ್ ಕೇಂದ್ರದಿಂದ ಡಾ. ವಿಕ್ರಮ್ ಪಾಟೀಲ್ (ಜೆಎಸ್‌ಎಸ್ ಎಹೆಚ್‌ಇಆರ್), ಪ್ರೊ. ಸುರೇಶ್ ರೇಣುಕಪ್ಪ (ವೊಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯ ಮತ್ತು ರಾಯಲ್ ವೊಲ್ವರ್‌ಹ್ಯಾಂಪ್ಪನ್ ಎನ್‌ಹೆಚ್‌ಎಸ್ ಟ್ರಸ್ಟ್) ಅವರು ಸಂಘಟಿಸಿದ್ದರು.
ಕಾರ್ಯಾಗಾರದ ಮುಖ್ಯ ಉದ್ದೇಶವು ” ನಾಗರಿಕರು, ಆರೋಗ್ಯ ಸೇವೆ ಒದಗಿಸುವವರು ಮತ್ತು ಸರ್ಕಾರಗಳು ಎಬಿಡಿಎಂ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕವನ್ನು ಅಳವಡಿಸಿಕೊಳ್ಳುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವುದು ಮತ್ತು ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಪರಿಶೀಲಿಸುವುದಾಗಿತ್ತು. ಈ ಅಂತಾರಾಷ್ಟ್ರೀಯ ಕಾರ್ಯಾಗಾರವು ಜ್ಞಾನ ವಿನಿಮಯ, ಸಂವಾದ ಮತ್ತು ಸಹಯೋಗಕ್ಕಾಗಿ ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಇದು ಹೆಚ್ಚು ಅಂತರ್ಗತ, ಸುಸ್ಥಿರ ಮತ್ತು ತಂತ್ರಜ್ಞಾನ – ಚಾಲಿತ ಆರೋಗ್ಯ ಪರಿಹಾರಗಳಿಗೆ ದಾರಿ ಮಾಡಿಕೊಟ್ಟಿತು. “
ಕಾರ್ಯಕ್ರಮವನ್ನು ಜೆಎಸ್‌ಎಸ್ ಎಹೆಚ್‌ಇಆರ್‌ನ ಕುಲಪತಿಗಳಾದ ಡಾ. ಎಚ್. ಬಸವನಗೌಡಪ್ಪ ಉದ್ಘಾಟಿಸಿದರು. ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ರಿಸರ್ಚ್ ಅಂಡ್ ನಾಲೆಡ್ ಎಕ್ಸ್‌ಚೇಂಜ್‌ನ ಪ್ರೊ. ವಿಸಿ ಪ್ರೊ. ಪ್ರಶಾಂತ್ ಪಿಳ್ಳೆ ಮುಖ್ಯ ಭಾಷಣ ಮಾಡಿದರು. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ಪ್ರೊ. ಉತ್ಸಲ್ ಟಾಟು ಅವರು ‘ ಒನ್ ಹೆಲ್ತ್ ‘ ಪರಿಕಲ್ಪನೆಯ ಕುರಿತು ವಿಶೇಷ ಭಾಷಣ ಮಾಡಿದರು. ಚಾಮರಾಜನಗರ ಜಿಲ್ಲೆಯ ಆರೋಗ್ಯ ಸೇವೆಗಳಿಂದ ಡಾ. ಪಿ. ಚಂದ್ರಶೇಖರ್ ಮತ್ತು ಡಾ. ಪ್ರಕಾಶ್ ಎಬಿಡಿಎಂ ಕುರಿತು ಸರ್ಕಾರದ ದೃಷ್ಟಿಕೋನವನ್ನು ಹಂಚಿಕೊಂಡರು. ರಾಯಲ್ ವೊಲ್ವರ್‌ಹ್ಯಾಂಪ್ಟನ್ ಹಾಸ್ಪಿಟಲ್ಸ್ ಎನ್‌ಹೆಚ್‌ಎಸ್ ಟ್ರಸ್ಟ್‌ನ ಕ್ಲಿನಿಕಲ್ ರಿಸರ್ಚ್ ಡೈರೆಕ್ಟರ್ ಆದ ಪ್ರೊ. ಟೋನಿ ವಿನಿತ್ ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಹೆಚ್‌ಎಸ್) ಕುರಿತು ಮಾಹಿತಿ ನೀಡಿದರು. ರಾಮಯ್ಯ ವೈದ್ಯಕೀಯ ಕಾಲೇಜಿನ ಪ್ರೊ. ನಂದ ಕುಮಾರ್ ಉದಯೋನ್ಮುಖ ಆರೋಗ್ಯ ತಂತ್ರಜ್ಞಾನಗಳ ಪಾತ್ರದ ಬಗ್ಗೆ ಚರ್ಚಿಸಿದರು. ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನ (ಟಿಇಆರ್‌ಐ) ನಾಗರಾಜು ಯಬ್ಬಟ್ಟಿ ಆರೋಗ್ಯ ಸೇವೆಗಳಿಗಾಗಿ ಸುಸ್ಥಿರ ಇಂಧನ ಪರಿಹಾರಗಳ ಬಗ್ಗೆ ವಿವರಿಸಿದರು. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗದ ಸಿಇಒ ಡಾ. ಡಿ. ಬಿ. ನಟೇಶ್ ನೀತಿ ಅನುಷ್ಠಾನದ ಸವಾಲುಗಳನ್ನು ಕುರಿತು ಮಾತನಾಡಿದರು.
ಜೆಎಸ್‌ಎಸ್ ಎಹೆಚ್‌ಇಆರ್‌ನ ಅಧ್ಯಾಪಕರು ಮತ್ತು ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ತಜ್ಞರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಎಬಿಡಿಎಂ ಅಳವಡಿಕೆಯ ಚಾಲಕಗಳು, ಸವಾಲುಗಳು ಮತ್ತು ಉತ್ತಮ ಅಭ್ಯಾಸಗಳ ಕುರಿತು ಗುಂಪು ಚರ್ಚೆಗಳನ್ನು ಆಯೋಜಿಸಲಾಯಿತು. ಜೆಎಸ್‌ಎಸ್ ಎಹೆಚ್‌ಇಆರ್‌ನ ಡಾ. ಪಿ. ಸುಷ್ಮಾ ಮತ್ತು ಡಾ. ಎಸ್. ಚಂದನ್ ಸಂವಾದಾತ್ಮಕ ಅಧಿವೇಶನಗಳು ಮತ್ತು ಚರ್ಚೆಗಳೊಂದಿಗೆ ಕಾರ್ಯಾಗಾರವನ್ನು ಸುಗಮಗೊಳಿಸಿದರು. ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಪ್ರೊ. ಸುಭಾಷಿಣಿ ಸುರೇಶ್ ಅವರ ಮಾತುಗಳೊಂದಿಗೆ ಕಾರ್ಯಾಗಾರವು ಮುಕ್ತಾಯಗೊಂಡಿತು. ಈ ಕಾರ್ಯಕ್ರಮವು ಡಿಜಿಟಲ್ ಮತ್ತು ಸ್ಮಾರ್ಟ್ ನೀತಿಗಳ ಮೂಲಕ ಪರಿಣಾಮಕಾರಿ, ದಕ್ಷ ಮತ್ತು ಅಂತರ್ಗತ ಆರೋಗ್ಯ ಸೇವೆಗಳನ್ನು ಒದಗಿಸುವ ಕುರಿತು ಸಂವಾದಕ್ಕಾಗಿ ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಿತು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಶಿಕಾರಿಪುರ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯ ಜನರ ಬದುಕು ಅತಂತ್ರ
ಪ್ರೊ. ಸುಬಾಶಿನಿ ಸುರೇಶ್, ವುಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯ,ಡಾ. ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಪ್ರೊ. ಸುರೇಶ್ ರೇಣುಕಪ್ಪ, ವುಲ್ವರ್‌ಹ್ಯಾಂಪ್ಸನ್ ವಿಶ್ವವಿದ್ಯಾಲಯ ಮತ್ತು ರಾಯಲ್ ವುಲ್ವರ್‌ಹ್ಯಾಂಪ್ಟನ್ ಎನ್‌ಎಚ್‌ಎಸ್ ಟ್ರಸ್ಟ್ ಪ್ರೊ. ಉತ್ಪಲ್ ಟಾಟು, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಪ್ರೊ. ಡಾ. ಎಚ್. ಬಸವನಗೌಡಪ್ಪ, ಕುಲಪತಿ, ಜೆಎಸ್‌ಎಸ್ ಎಹೆಚ್ ಇಆರ್ ಪ್ರೊಫೆಸರ್ ಡಾ. ವಿಕ್ರಮ್ ಪಾಟೀಲ್, ಉಪ ಡೀನ್ ಪ್ರೊ. ಡಾ. ಪ್ರಶಾಂತ್ ವಿಶ್ವನಾಥ್, ಪ್ರೊ. ಡಾ. ಡಿ.ನಾರಾಯಣಪ್ಪ, ಜೆಎಸ್‌ಎಸ್ ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಡಾ. ಎಸ್. ಚಂದನ್, ಉಪ ಡೀನ್ ನಾಗರಾಜು, ಟೆರಿ ಮುಂತಾದವರು ಇದ್ದರು.