ದೆಹಲಿಯ 50ಕ್ಕೂ ಅಧಿಕ ಶಾಲೆಗಳಿಗೆ ಬುಧವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಸುಮಾರು 32 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿತ್ತು.
ದ್ವಾರಕಾದ ರಾಹುಲ್ ಮಾಡೆಲ್ ಸ್ಕೂಲ್ ಮತ್ತು ಮ್ಯಾಕ್ಸ್‌ಫೋರ್ಟ್ ಸ್ಕೂಲ್, ಮಾಳವೀಯ ನಗರದ ಎಸ್‌ಕೆವಿ ಮತ್ತು ಪ್ರಸಾದ್ ನಗರದ ಆಂಧ್ರ ಸ್ಕೂಲ್ ಸೇರಿದಂತೆ ಒಟ್ಟು ಐವತ್ತು ಶಾಲೆಗಳಿಗೆ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
ಇದನ್ನು ಓದಿದ್ದೀರಾ? ತಿರುಪತಿ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ
ಮಾಲ್ವೀಯ ನಗರದ ಎಸ್‌ಕೆವಿ ಮತ್ತು ಪ್ರಸಾದ್ ನಗರದ ಆಂಧ್ರ ಸ್ಕೂಲ್ ಎಂಬ ಎರಡು ಶಾಲೆಗಳಿಗೆ ಕ್ರಮವಾಗಿ ಬೆಳಿಗ್ಗೆ 7.40 ಮತ್ತು 7.42ಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. ಪೊಲೀಸ್ ತಂಡಗಳು, ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ತಕ್ಷಣ ಆವರಣಕ್ಕೆ ಧಾವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಸೋಮವಾರ ದೆಹಲಿಯ 32 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದೆ. ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ದ್ವಾರಕಾ, ಮಾಡ್ರನ್ ಕಾನ್ವೆಂಟ್ ಸ್ಕೂಲ್ ಮತ್ತು ಶ್ರೀರಾಮ್ ವರ್ಲ್ಡ್ ಸ್ಕೂಲ್‌ಗೆ ಬೆದರಿಕೆ ಇಮೇಲ್ ಬಂದಿತ್ತು. ಇದಕ್ಕೂ ಮುನ್ನ ಹಲವು ಬಾರಿ ಇದೇ ರೀತಿ ಹುಸಿ ಬಾಂಬ್ ಬೆದರಿಕೆ ಬಂದಿದೆ. ಜುಲೈ 18ರಂದು ದೆಹಲಿಯ 45 ಶಾಲೆಗಳಿಗೆ ಇದೇ ರೀತಿ ಹುಸಿ ಬೆದರಿಕೆ ಇಮೇಲ್ ಬಂದಿದೆ. ಈ ಕೃತ್ಯದ ಹಿಂದಿರುವವರ ಪತ್ತೆಗಾಗಿ ತನಿಖೆ ನಡೆಯುತ್ತಿದೆ.
