ಶಿವಮೊಗ್ಗ, ಪ್ರಪಂಚದ 19,340 ಅಡಿ ಎತ್ತರ ಶಿಖರ ಆಗಿರುವ ಆಫ್ರಿಕಾದಲ್ಲಿರುವ ಕಿಲಿ ಮಂಜಾರೋ ಪರ್ವತದ ತುತ್ತ ತುದಿಯನ್ನ ತಲುಪಿದ ಶ್ರೇಷ್ಠ ಸಾಧಕರ ಪಟ್ಟಿಯಲ್ಲಿ ನಿತ್ಯ ರಾವ್ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಸಮುದ್ರಮಟ್ಟದಿಂದ 5895 ಮೀಟರ್ ಎತ್ತರದಲ್ಲಿರುವ ಈ ಪರ್ವತವನ್ನು 6 ರಿಂದ 8 ದಿನಗಳ ಕಾಲ ಡೆಮೋಸಿ ಮಾರ್ಗದ ಮೂಲಕ ಶೂನ್ಯ ಉಷ್ಣಾಂಶದ ಕಠಿಣ ದಾರಿಯಲ್ಲಿ ಜ್ವಾಲಾಮುಖಿಯಿಂದ ನಿರ್ಮಿತವಾದ ಪರ್ವತವನ್ನ ಹತ್ತಿದ್ದಾರೆ.
ಇವರು ನಗರದ ಜ್ಞಾನದೀಪ ಶಾಲೆಯ ಮೇಲಿನ ಅಭಿಮಾನದಿಂದ ಹಾಗೂ ಹೆಮ್ಮೆಯಿಂದ ಜ್ಞಾನದೀಪ ಶಾಲೆಯ ಬಾವುಟವನ್ನು ಪರ್ವತದ ಮೇಲೆ ಹಾರಿಸಿದ್ದಾರೆ.
ಇವರು ಶಿವಮೊಗ್ಗದ ಪ್ರತಿಷ್ಠಿತ ಉಷಾ ನರ್ಸಿಂಗ್ ಹೋಮ್ ಆಸ್ಪತ್ರೆಯ ಡಾ|| ರಕ್ಷಾ ರಾವ್ ರವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ಪ್ರಸ್ತುತ ಇವರು ಶಿವಮೊಗ್ಗದ ಜ್ಞಾನದೀಪ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇವರ ಶಿಖರ ಆರೋಹಣದ ಆಸಕ್ತಿಯನ್ನು ಗಮನಿಸಿದ ಶಾಲೆ ಸಂಪೂರ್ಣವಾಗಿ ಬೆಂಬಲವಾಗಿ ನಿಂತು ಸಾಧನೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸಿತು.
ಈ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಜ್ಞಾನದೀಪ ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಹಾಗೂ ಸಿಬ್ಬಂದಿ ವರ್ಗದವರು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.