ಶಿವಮೊಗ್ಗ, ನಗರದ ಗೋಪಾಳದ ಕನಕದಾಸ ವೃತ್ತದಿಂದ ಬೈಪಾಸ್ ರಸ್ತೆಯು ಅನೇಕ ಬಡಾವಣಿಗಳು, ಅನುಪಿನಕಟ್ಟೆ, ಪುರದಾಳು, ಹನುಮಂತಾಪುರ ಊರುಗಳಿಗೆ ಸಂಪರ್ಕಿಸುವ ರಸ್ತೆಯಾಗಿದೆ. ಪ್ರಯಾಣಿಸುವ ವಾಹನಗಳಿಂದಾಗಿ ಈ ರಸ್ತೆಯು ತುಂಬಾ ಹಾಳಾಗಿದ್ದು ಓಡಾಟಕ್ಕೆ ತುಂಬಾ ತೊಂದರೆಯಾಗಿದೆ.
ಕೂಡಲೇ ಸದರಿ ರಸ್ತೆಗೆ ಡಾಂಬರೀಕರಣಗೊಳಿಸಬೇಕಾಗಿ ಕಡಿದಾಳ ರಾಮಪ್ಪ ಬಡಾವಣೆಯ ನಿವಾಸಿಗಳ ಸಂಘ ಆಗ್ರಹಿಸಿದೆ.
ಈ ಬಗ್ಗೆ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿರುವ ಸಂಘದವರು, ಈ ರಸ್ತೆಯಲ್ಲಿ ಪೋದಾರ್ ಇಂಟರ್‌ನ್ಯಾಷ್‌ನಲ್ ಶಾಲೆ ಇದ್ದು, ಸುಮಾರು 10 ಕ್ಕಿಂತ ಹೆಚ್ಚು ಶಾಲಾ ಬಸ್ಸುಗಳು, ಪೋಷಕರ ವಾಹನಗಳು, ಘನತ್ಯಾಜ್ಯ ವಿಲೇವಾರಿ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತವೆ ಮತ್ತು ಸಾಗರ ಮತ್ತು ಬೆಂಗಳೂರಿಗೆ ಪ್ರಯಾಣಿಸುವ ರಿಂಗ್ ರಸ್ತೆ (ಬೈಪಾಸ್) ಸಂಪರ್ಕಿಸುವ ರಸ್ತೆಯಾಗಿದೆ ಎಂದಿದ್ದಾರೆ.
ಡಾಂಬರೀಕರಣದಿಂದ ಮೇಲ್ಕಂಡ ಎಲ್ಲರಿಗೂ ಅನುಕೂಲವಾಗಿದೆ. ಶಾಸಕರು ಮತ್ತು ಲೋಕಸಭಾ ಸದಸ್ಯರಿಗೂ ಗ್ರಾಮ ಪಂಚಾಯ್ತಿಗಳಿಗೆ ಸಂಪರ್ಕಿಸಿದರೂ ಸಹ ಕಾರ್ಯವಾಗಿಲ್ಲ, ಆದ್ದರಿಂದ ಪಾಲಿಕೆ ವತಿಯಿಂದ ಡಾಂಬರ್ ಹಾಕಿಸಿ ರಸ್ತೆ ಮಾಡಿಕೊಡಬೇಕೆಂದು ಮನವಿಯಲ್ಲಿ ಅಗ್ರಹಿಸಿದ್ದಾರೆ.