ತೀವ್ರ ಕುತೂಹಲ ಮೂಡಿಸಿದ್ದ ಕೋಲಾರದ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದೆ. ಕಾಂಗ್ರೆಸ್ 6, ಬಿಜೆಪಿ 6, ಜೆಡಿಎಸ್ 4 ಹಾಗೂ ಪಕ್ಷೇತರವಾಗಿ ಒಬ್ಬರು ಅಭ್ಯರ್ಥಿ ಜಯಗಳಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಣಕ್ಕಿಳಿದಿತ್ತು. ಆದರೆ, ಕಾಂಗ್ರೆಸ್ ಪಕ್ಷ ವೇಮಗಲ್ ಕುರುಗಲ್ ಭಾಗದಲ್ಲಿ ಪ್ರಭಾವವಾಗಿದ್ದ ಮೈತ್ರಿ ವಿರುದ್ಧ ಬಿರುಸಿನ ಪ್ರಚಾರ ಮಾಡಿತ್ತು ಹಾಗೂ ಹಲವಾರು ಮೈತ್ರಿ ಮುಖಂಡರನ್ನು ಸಹ ಸೆಳೆದರು ಸಹ 17 ಸ್ಥಾನಗಳಲ್ಲಿ ಆರು ಸ್ಥಾನವನ್ನು ಪಡೆದಿದೆ. ವೇಮಗಲ್ ಕುರುಗಲ್ ಭಾಗದಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್ ರವರ ಪ್ರಭಾವ ಹೆಚ್ಚಿರುವ ಕಾರಣದಿಂದ ಮೈತ್ರಿ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ ಎನ್ನಲಾಗಿದೆ.
ಕೋಲಾರ ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ 6 ಸ್ಥಾನ ಪಡೆದು ಮತ ಪ್ರಮಾಣವನ್ನು ಕಳೆದ ಬಾರಿ ಚುಣಾವಣೆಗಿಂತ ಹೆಚ್ಚಿಗೆ ಪಡೆದಿದೆ.

1ನೇ ವಾರ್ಡ್ ಚನ್ನಪ್ಪನಹಳ್ಳಿ- ಕುರುಬರಹಳ್ಳಿ ಕಾಂಗ್ರೆಸ್, 2 ಬೆಟ್ಟಹೊಸಪುರ- ಮಂಜಲಿ ಮೈತ್ರಿ, 3 ನೇ ವಾರ್ಡ್ ಕಲ್ವ-ಚಿಕ್ಕವಲ್ಲಬ್ಬಿ ಜೆಡಿಎಸ್, 4 ನೇ ವಾರ್ಡ್ ಮಲಿಯಪ್ಪನಹಳ್ಳಿ ಜೆಡಿಎಸ್, 5 ನೇ ವಾರ್ಡ್ ಜೆಡಿಎಸ್ ಮೈತ್ರಿ, 6 ನೇ ವಾರ್ಡ್ ಬಿಜೆಪಿ ಮೈತ್ರಿ, 7 ನೇ ವಾರ್ಡ್ ಕಾಂಗ್ರೆಸ್ ಗೆಲುವು, ಕುರುಗಲ್ – 8 ನೇ ವಾರ್ಡ್ ಮೈತ್ರಿ, ಕುರುಗಲ್ ಎ 9 ನೇ ವಾರ್ಡ್ -1 ಬಿಜೆಪಿ, 10 ನೇ ವಾರ್ಡ್ ಹಾರ್ಜೇನಹಳ್ಳಿ ಕಾಂಗ್ರೆಸ್, 11 ನೇ ವಾರ್ಡ್ ಪೇರ್ಜೆನಹಳ್ಳಿ- ಪುರಹಳ್ಳಿ ಕಾಂಗ್ರೆಸ್, 12 ಐಬಿ- ಸಿಂಗೇಹಳ್ಳಿ ವಾರ್ಡ್ ಮೈತ್ರಿ ಬಿಜೆಪಿ, ವೇಮಗಲ್ – ಎ 1 ಪಕ್ಷೇತರ ಅಭ್ಯರ್ಥಿ ಶಿಲ್ಪಾ ಶಿವಶಂಕರ್, ವೇಮಗಲ್ ಎ -2 ಮೈತ್ರಿ ಬಿಜೆಪಿ, ವೇಮಗಲ್ – ಬಿ 2 ಬೆಜೆಪಿ, 15 ನೇ ವಾರ್ಡ್ ಕಾಂಗ್ರೆಸ್, 17 ನೇ ವಾರ್ಡ್ ವೇಮಗಲ್ ಸಿ ಬ್ಲಾಕ್ ನಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿವೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ವೇಮಗಲ್ ಕುರುಗಲ್ ಭಾಗದ ಜನರು ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲಿಸಿದ್ದಾರೆ, ಎಂದು ಹೇಳಿದ ಕೋಲಾರ ಜೆಡಿಎಸ್ ಮುಖಂಡ CMR ಶ್ರೀನಾಥ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕೋಲಾರ | ಗುದ್ದಲಿ ಪೂಜೆಯಾಗಿ ವರ್ಷ ಕಳೆದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ: ಸ್ಥಳೀಯರ ಆಕ್ರೋಶ
ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿಯಲ್ಲಿ ಚುನಾವಣೆ ನಡೆದು ಮೈತ್ರಿ ಗೆ ಜನರು ಬೆಂಬಲ ನೀಡಿದ್ದಾರೆ ನಮಗೆ ಜನ ಸೇವೆ ಮಾಡಕ್ಕೆ ಅವಕಾಶ ನೀಡಿದ್ದು ಎಲ್ಲರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ ಹಾಗೂ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿಯನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಕೋಲಾರ ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದರು.