ಶಿವಮೊಗ್ಗ, ಕುವೆಂಪು ವಿ.ವಿ. ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ, ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜು ವಿಜ್ಞಾನ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಆ.21ರ ನಾಳೆ ಬೆಳಿಗ್ಗೆ 10.30ಕ್ಕೆ ಡಿವಿಎಸ್ ಸಿಂಗಾರ ಸಂಭಾಗಣದಲ್ಲಿ ವಿಶೇಷ ಉಪನ್ಯಾಸ ಹಾಗೂ ಪದವಿ ಕನ್ನಡ ಪಠ್ಯ ಪುಸ್ತಕಗಳ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿಮೂಡ್ನಾಕೂಡು ಚಿನ್ನಸ್ವಾಮಿ ದಲಿತ ಸಾಂಸ್ಕೃತಿಕ ಚಿಂತನೆ ಕುರಿತು ವಿಚಾರ ಮಂಥನ ನಡೆಸುವರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ವಹಿಸಲಿದ್ದು, ಪಠ್ಯ ಪುಸ್ತಕಗಳನ್ನು ಕುವೆಂಪು ವಿವಿಯ ಸ್ನಾತಕ ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಪ್ರೊ. ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಬಿಡುಗಡೆ ಮಾಡುವರು.
ಕಾರ್ಯಕ್ರಮದಲ್ಲಿ ಅಧ್ಯಪಕರ ವೇದಿಕೆಯ ಅಧ್ಯಕ್ಷೆ ಪ್ರೊ.ಸಬಿತ ಬನ್ನಾಡಿ, ಕಾರ್ಯದರ್ಶಿ ಪ್ರೊ.ಎಸ್.ಎಂ. ಮುತ್ತಯ್ಯ, ಪ್ರೊ. ಕುಮಾರಸ್ವಾಮಿ ಎನ್., ಬಿ.ಎನ್.ಸುನೀಲ್‌ಕುಮಾರ್ ಮುಂತಾದವರು ಉಪಸ್ಥಿತರಿರುವರು.