ನಗರದ ಬಸವೇಶ್ವರ ವೃತ್ತದ ಬಳಿಯ ಯೂನಿಯನ್ ಬ್ಯಾಂಕ್ ನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ.
ಬೆಳಗಿನ ಜಾವ ದಟ್ಟವಾದ ಹೊಗೆ ಆವರಿಸಿಕೊಂಡ ಕಾರಣ ಸ್ಥಳೀಯರು ಕಂಡು ಅಗ್ನಿ ಶಾಮಕ ದಳ ಠಾಣೆಗೆ ಕರೆ ಮಾಡಿದ್ದು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಸಾರ್ವಜನಿಕರು 5:30ಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ 6 ಗಂಟೆಗೆ ಅಗ್ನಿಶಾಮಕ ದಳದ ತಂಡ ಬಂದರೂ ಅರ್ಧಗಂಟೆ ಕಾಯಿಸಿದ ಬಳಿ ಬ್ಯಾಂಕ್ ಮ್ಯಾನೇಜರ್ 6:30 ಬಂದು ಬೀಗ ತೆರೆದಾಗ ಬೆಂಕಿ ನಂದಿಸುವ ಕಾರ್ಯ ಆರಂಭಿಸಲಾಗಿದೆ. ಅಷ್ಟೊತ್ತಿಗೆ ಬೆಂಕಿ ಆವರಿಸಿಕೊಂಡ ಪರಿಣಾಮ ಎರಡು ಎ.ಸಿ ಸ್ಫೋಟಗೊಂಡು ಫರ್ನೀಚರ್ ಗಳು ಸುಟ್ಟು ಕರಕಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಾನ್ವಿ | ಬಯಲು ಪ್ರದೇಶದಲ್ಲಿ ನವಜಾತ ಮೃತ ಶಿಶು ಪತ್ತೆ
ಈ ವೇಳೆ ಅಗ್ನಿಶಾಮಕ ದಳ ಠಾಣಾಧಿಕಾರಿ ವೀರೇಶ, ಸಹಾಯಕ ಅಧಿಕಾರಿ ನರಸಪ್ಪ, ,ಸಿಬ್ಬಂದಿ ಡಿ.ಕೆ ಶ್ರೀನಿವಾಸ, ನರಸಿಂಹಲು, ದೇವರಾಜ ಉಪಸ್ಥಿತರಿದ್ದರು.

Navilagudda