ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ವಿನೋಬನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ಹೋಟೆಲ್ ವೊಂದರಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಹೊಟೆಲ್ ಕೆಲಸದ ಜನಾರ್ದನ (26) ಸಾವಿಗೀಡಾದವನು.
ಆಯುಧಗಳಿಂದ ಇರಿಯಲಾಗಿದ್ದ ಈತನನ್ನು ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಜನಾತ್ದನ ತಾಲೂಕಿನ ಬನ್ನಿಕೋಡು ಗ್ರಾಮದವನು. ಕೊಲೆಮಾಡಿದವನನ್ನು ಹನುಮಂತ ಎಂದು ಗುರಿತಿಸಿ ಬಂಧಿಸಲಾಗಿದೆ.
6 ವರ್ಷದ ಹಿಂದೆ ಜನಾರ್ದನನ ಜೊತೆ ಹನುಮಂತು ಬೈಕಿನಲ್ಲಿ ಹೋಗುವಾಗ ಅಪಘಾತವಾಗಿತ್ತು. ಅಪಘಾತದಲ್ಲಿ ಹನುಮಂತುವಿಗೆ ತೀವ್ರ ಗಾಯವಾಗಿತ್ತು. ಗಾಯಗೊಂಡಿದ್ದ ಹನುಮಂತುವಿಗೆ ಸೂಕ್ತ ಚಿಕಿತ್ಸೆಯಾಗಲಿ ಅಥವಾ ಪರಿಹಾರ ನೀಡಿಲ್ಲ ಎಂಬ ಕಾರಣಕ್ಕೆ ಹನುಮಂತು ಜನಾರ್ದನ ಮೇಲೆ ದ್ವೇಷ ಕಾರುತ್ತಿದ್ದ ಎನ್ನಲಾಗಿದೆ. ನಿನ್ನೆ ಇದೇ ವಿಚಾರಕ್ಕೆ ಆಯುಧಗಳಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ.

ಸಂಬಂಧದಲ್ಲಿ ಇಬ್ವರೂ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಹನುಮಂತುನನ್ನು ವಿನೋಬ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮೃತದೇಹವನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.