ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಇಲ್ಲಿನ ಹೊಸಪೇಟೆ ಬಡಾವಣೆಯ ಹುಚ್ಚಪ್ಪ ಎಂಬುವರಿಗೆ ಸೇರಿದ 6 ವರ್ಷದ ಜರ್ಸಿ ಆಕಳು ಆಹಾರ ಅರಸಿ ಹೋಗಿ ಸುಮಾರು 3೦ ಅಡಿ ಆಳದ ಬಾವಿಗೆ ಬಿದ್ದಿತ್ತು.
ವಿಷಯ ತಿಳಿದ ಅಗ್ನಿಶಾಮಕದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಆಕಳನ್ನು ರಕ್ಷಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಠಾಣಾಧಿಕಾರಿ ಕೆ.ಮಹಬಲೇಶ್ವರ್, ಸಹ ಠಾಣಾಧಿಕಾರಿ ಆರ್. ಶಂಕರ್, ಸಿಬ್ಬಂದಿಗಳಾದ ಶ್ರೀಶೈಲ ಬಿ. ಚಿಪ್ಪಲಕಟ್ಟಿ, ಸಂದೀಪ್ ರಾಠೋಡ್ , ಭೀಮಪ್ಪ ತುಂಗಳ ಇದ್ದರು.