ಶಿವಮೊಗ್ಗ, ನಗರ ಮಧ್ಯದಲ್ಲಿ ಹರಿಯುತ್ತಿರುವ ತುಂಗಾನದಿ ಪ್ರತಿವರ್ಷದಂತೆ ಈ ಬಾರಿಯೂ ತುಂಬಿ ಹರಿಯುತ್ತಿದ್ದಾಳೆ. ಶ್ರಾವಣ ಮಾಸದಲ್ಲಿ ಬಾಗಿನ ಅರ್ಪಿಸಿ ತುಂಗೆಯ ಆಶೀರ್ವಾದ ಪಡೆದಿದ್ದೇವೆ. ಜಿಲ್ಲೆ ಹಾಗೂ ನಗರ ಸಮೃದ್ಧಿಯಾಗಿರಲಿ, ತುಂಗೆ ಶಾಂತವಾಗಿರಲಿ ಎಂದು ಪ್ರಾರ್ಥಿಸಿದ್ದಾಗಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಬುಧವಾರ ನಗರದ ಕೋಟೆ ರಸ್ತೆಯಲ್ಲಿರುವ ಕೋರ್ಪಲಯ್ಯನ ಛತ್ರದ ಬಳಿ ಮೈದುಂಬಿ ಹರಿಯುತ್ತಿರುವ ತುಂಗಾನದಿಗೆ ಶಿವಮೊಗ್ಗ ನಗರ ಜೆಡಿಎಸ್ ಘಟಕದ ವತಿಯಿಂದ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದರು.
Hivaಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಕೆ.ಎನ್. ರಾಮಕೃಷ್ಣ, ತ್ಯಾಗರಾಜ್, ಹೆಚ್.ಎಂ. ಸಂಗಯ್ಯ, ಚಂದ್ರಶೇಖರ್, ಮಾಧವಮೂರ್ತಿ, ಗೀತಾಂಜಲಿ ಪ್ರಸನ್ನಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾ ಸತೀಶ್, ಚಂದ್ರಮತಿ ಹೆಗಡೆ ಮೊದಲಾದವರಿದ್ದರು.