ಶಿವಮೊಗ್ಗ, ಮಲೆನಾಡು ರೈತರ ಸಮಸ್ಯೆ ಹಾಗೂ ಕಾಂತ್‌ರಾಜ್ ವರದಿಯ ಜಾರಿಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಬೃಹತ್ ಅಹಿಂದ ಸಮಾವೇಶ ನಡೆಸಲುದ್ದೇಶಿಸಲಾಗಿದ್ದು, ಇದರ ಪೂರ್ವಸಿದ್ಧತೆಯ ಸಭೆಯನ್ನು ಆ.23 ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಆರು ಜಿಲ್ಲೆಗಳ ಅಹಿಂದ ನಾಯಕರು ಇದರಲ್ಲಿ ಪಾಲ್ಗೊಳ್ಳುವರು ಎಂದು ಅಹಿಂದ ರಾಜ್ಯ ಸಂಚಾಲಕ ಸಾಗರದ ತೀ.ನ. ಶ್ರೀನಿವಾಸ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 1996ರಲ್ಲಿ 43 ಸಾವಿರ ಎಕರೆ ಜಮೀನನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಅರಣ್ಯ ಇಲಾಖೆಯೇ 2೦ ಸಾವಿರ ಕುಟುಂಬಗಳಿಗೆ ಜಮೀನು ಮಂಜೂರು ಮಾಡಬೇಕೆಂದು ಶಿಫಾರಸ್ಸು ಮಾಡಿ, 25 ವರ್ಷಗಳಾದರೂ ಒಂದೂ ಕುಟುಂಬಕ್ಕೂ ಜಮೀನು ಮಂಜೂರಾತಿ ನೀಡಿಲ್ಲ. ರೈತರ ದಾಖಲೆ ಅರಣ್ಯಭವನದಲ್ಲಿ ನಾಶವಾಗಿದೆ ಎಂದು ಹೇಳುತ್ತಿದ್ದಾರೆ ಎಂದರು.
ವಿದ್ಯುತ್ ಯೋಜನೆ, ಕೃಷಿಗಾಗಿ ಅಣೆಕಟ್ಟು ಕಟ್ಟಲು ತಮ್ಮ ಭೂಮಿ, ಮನೆಗಳನ್ನು ತ್ಯಾಗಮಾಡಿದ ಶರಾವತಿ, ತುಂಗಭದ್ರ, ವರಾಹಿ, ಚಕ್ರಾ, ಸಾವೇಹಕ್ಲು, ಅಂಬ್ಲಿಗೊಳ ಮುಳುಗಡೆ ಸಂತ್ರಸ್ಥರಿಗೆ ಇನ್ನೂ ಜಮೀನು ಕೊಟ್ಟಿಲ್ಲ. ಅಹಿಂದ ವರ್ಗದವರು ಶೇ.೭೫ರಷ್ಟು ಜನಸಂಖ್ಯೆ ಇದ್ದರೂ ದೇಶದಲ್ಲಿ ಸಾಮಾಜಿಕ ನ್ಯಾಯ ಕೊಟ್ಟಿಲ್ಲ ಎಂದರು.
ವಿ.ಪಿ. ಸಿಂಗ್, ಮಂಡಲ್ ವರದಿ ಜಾರಿ, ದೇವರಾಜ ಅರಸು ಹಾಗೂ ಹಾವನೂರು ಆಯೋಗದ ವರದಿ ಜಾರಿ ಮಾಡಿದ್ದು ಬಿಟ್ಟರೆ ಬೇರೆ ಯಾವ ಜನಪ್ರತಿನಿಧಿಗಳು ಈ ಬಗ್ಗೆ ಕಾರ್ಯ ಮಾಡಿಲ್ಲ.
ಕಾಂತ್‌ರಾಜ್ ಆಯೋಗ ವರದಿ, ಅಂಕಿಅಂಶ 1೦ ವರ್ಷದ ಹಿಂದಿನದ್ದು ಎಂದು ಹೇಳಿ ಸರ್ಕಾರ ಘೋಷಿಸಿದೆ. ಸರ್ಕಾರ ಸಾಮಾಜಿಕ ಹೊಸದಾಗಿ ಸರ್ವೆ ಮಾಡುವುದಾಗಿ ನ್ಯಾಯಕ್ಕೆ ಸಂಚಕಾರ ತಂದಿದ್ದು ಸಾಮಾಜಿಕ ಹೋರಾಟ ನ್ಯಾಯ ನೀಡಬೇಕು ಅದನ್ನು ಪಡೆಯುವ ಮಾಡಲು ತೀರ್ಮಾನ ಮಾಡಬೇಕಾಗಿದೆ ಎಂದರು.