ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ ಸೆಪ್ಟೆಂಬರ್ 3 ರಂದು ಜಿಲ್ಲಾ ಮಟ್ಟದ ರಂಗೋಲಿ, ಬಾಲ ಬಸವಣ್ಣ ಹಾಗೂ ಇತರ ಬಾಲ ಶರಣರ ವೇಷಧಾರಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.
ರಂಗೋಲಿ ಸ್ಪರ್ಧೆ ವಿಜೇತರಿಗೆ ₹10 ಸಾವಿರ ಪ್ರಥಮ, ₹6 ಸಾವಿರ ದ್ವಿತೀಯ ಹಾಗೂ ₹4 ಸಾವಿರ ತೃತೀಯ ಬಹುಮಾನ ನೀಡಲಾಗುವುದು. 15 ವರ್ಷ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಸ್ಪರ್ಧಾಳುಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ಬಿ.ವಿ. ಭೂಮರಡ್ಡಿ ಕಾಲೇಜು ಆವರಣದಲ್ಲಿ ಕನಿಷ್ಠ 5 ಅಡಿ x 5 ಅಡಿಯ ರಂಗೋಲಿ ಬಿಡಿಸಬೇಕಾಗಲಿದೆʼ ಎಂದು ಹೇಳಿದ್ದಾರೆ.
ಆಸಕ್ತರು ಹೆಸರು ನೋಂದಣಿಗೆ ಗುಂಡಪ್ಪ ಬಳತೆ (9448407946), ಚಂದ್ರಕಾಂತ ಮಿರ್ಚೆ (9886599511), ಉಮೇಶ ಪಾಟೀಲ (8123197936) ಅಥವಾ ಜಯದೇವಿ ಯದಲಾಪುರೆ (8105595123) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲ ಬಸವಣ್ಣ, ಶರಣರ ವೇಷಧಾರಿ ಸ್ಪರ್ಧೆ :
ಬಾಲ ಬಸವಣ್ಣ ಹಾಗೂ ಇತರ ಬಾಲ ಶರಣರ ವೇಷಧಾರಿ ಸ್ಪರ್ಧೆ ವಿಜೇತರಿಗೆ ₹5 ಸಾವಿರ ಪ್ರಥಮ, ₹3 ಸಾವಿರ ದ್ವಿತೀಯ ಮತ್ತು ₹2 ಸಾವಿರ ತೃತೀಯ ಬಹುಮಾನ ಕೊಡಲಾಗುವುದು ಎಂದು ಹೇಳಿದ್ದಾರೆ.
4 ವರ್ಷದಿಂದ 8 ವರ್ಷದ ಒಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳು ಸಂಜೆ 4ಕ್ಕೆ ಬಸವ ಮುಕ್ತಿ ಮಂದಿರದಲ್ಲಿ ಸೇರಬೇಕು. ಅಲ್ಲಿಂದ ಬಿ.ವಿ. ಭೂಮರಡ್ಡಿ ಕಾಲೇಜಿನ ಬಸವ ಸಂಸ್ಕೃತಿ ಅಭಿಯಾನದ ಬಹಿರಂಗ ಸಭೆಯ ವೇದಿಕೆ ವರೆಗೆ ಪಥ ಸಂಚಲನದಲ್ಲಿ ಪಾಲ್ಗೊಳ್ಳಬೇಕು. ಬಹಿರಂಗ ಸಭೆಯಲ್ಲಿ ವಿಜೇತರ ಹೆಸರು ಪ್ರಕಟಿಸಿ ಬಹುಮಾನ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೀದರ್ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಆಸಕ್ತರು ಹೆಸರು ನೋಂದಣಿಗೆ ರಾಚಯ್ಯ ಸ್ವಾಮಿ (ಮೊ: 8123958468), ವಿಶ್ವನಾಥ ಕಣಜಿ (9731631287), ವಿಶ್ವನಾಥ ಬೆಮಳಗಿ (9342354500), ಬಸವರಾಜ ತಳವಾಡೆ (9900583351) ಅಥವಾ ಶಿವರಾಜ ಶ್ರೀಮಂಗಲೆ (9900605957) ಅವರನ್ನು ಸಂಪರ್ಕಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ಕೊಡಲಾಗುವುದು. ನಿರ್ಣಾಯಕರ ತೀರ್ಪು ಅಂತಿಮ ಎಂದು ಹೇಳಿದ್ದಾರೆ.
