ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.
ನಗರದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ದೇವರಾಜ ಅರಸು ಆಡಳಿತದಲ್ಲಿ ಉಳುವವನೇ ಭೂ ಒಡೆಯ ಎಂದು ಘೋಷಿಸಿ ಅಂದಿನ ಭೂಹೀನರಿಗೆ ಭೂಮಿ ದೊರೆಯಲು ಸಾಧ್ಯವಾಯಿತು. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ದೇವರಾಜು ಅರಸು ಆದರ್ಶವಾಗಿದ್ದರೆ ಭೂಹೀನರಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಭೂಮಿಯನ್ನು ಸರ್ಕಾರ ಎಂದು ನಮೂದಿಸಿ ಭೂ ಮಾಲೀಕತ್ವ ಪಡೆದು ಜನರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಯಾವುದು ಕೇಳದೇ ಭೂಮಿ ಮಂಜೂರಿಗೆ ಮುಂದಾಗಿದೆ. ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಒತ್ತುವರಿ ರಕ್ಷಿಸಿರುವ ಭೂಹೀನರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ಬೇಜವಾಬ್ದಾರಿ ವರ್ತಿಸುತ್ತಿರುವುದು ಖಂಡನೀಯ. ಅಂದು ಭೂ ಮಾಲೀಕರು ಶೋಷಣೆ ಮಾಡಿದರೆ,ಇಂದು ಸರ್ಕಾರವೇ ಭೂಮಾಲೀಕನಾಗಿ ಭೂಹೀನರಿಗೆ ಭೂಮಿ ನೀಡಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ದಲಿತರು,ಅಲೆಮಾರಿಗಳು, ಹಿಂದುಳಿದ ವರ್ಗಗಳ ಜನರು ಅನುಭವಿಸುತ್ತಿರುವ ಸಮಸ್ಯೆ ಒಂದು ಬಾರಿ ಅವಕಾಶ ನೀಡಿ ಭೂಮಿ ಹಂಚಿಕೆ ಮಾಡಬೇಕು. ಫಾರಂ, 50,53,57 ಅರ್ಜಿದಾರರಿಗೆ ಕಾರಣ ನೀಡಿ ಭೂಮಿ ಮಂಜೂರಾತಿ ನೀಡುತ್ತಿಲ್ಲ. ಆದರೆ ಕೈಗಾರಿಕೆಗಳಿಗೆ ಭೂಮಿಯನ್ನು ಸರ್ಕಾರ ನೀಡುತ್ತಿದೆ. ಕೂಡಲೇ ಸಾಗುವಳಿದಾರರಿಗೆ ಸಾಗುವಳಿ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಯೂನಿಯನ್ ಬ್ಯಾಂಕ್ ನಲ್ಲಿ ಅಗ್ನಿ ಅವಘಡ
ಈ ಸಂದರ್ಭದಲ್ಲಿ ಆಂಜನೇಯ ಕುರುಬದೊಡ್ಡಿ, ವೀರೇಶ ಗಣದಿನಿ, ಮಾರೆಮ್ಮ, ನಾರಾಯಣಸ್ವಾಮಿ, ಶಿವರಾಜ ಪುರುತಿಪ್ಲಿ, ಈರಪ್ಪ ಇದ್ದರು.