ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ ಕರೋಕೆ ಸಂಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ವರ್ಧೆಯಲ್ಲಿ ವಿಜೇತರಾದವರಿಗೆ ಜಗಳೂರು ಶಾಸಕ ಬಿ ದೇವೇಂದ್ರಪ್ಪರವರು ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಸೇರಿದಂತೆ ವಿಜೇತರಿಗೆ ಬಹುಮಾನ ರೂಪದಲ್ಲಿ ಸ್ವಂತವಾಗಿ ವೇದಿಕೆ ಕಾರ್ಯಕ್ರಮದಲ್ಲಿ ವಿತರಿಸಿ ಕಲಾಪೋಷಕರಿಗೆ ಪ್ರೋತ್ಸಾಹ ನೀಡಿ ಶ್ಲಾಘಿಸಿದರು.
ಜಗಳೂರಿನ ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮವನ್ನ ಉದ್ಗಾಟಿಸಿ ಮಾತನಾಡಿದ ಕ್ಷೇತ್ರ ಶಾಸಕ ಬಿ ದೇವೇಂದ್ರಪ್ಪ, “ಮನುಷ್ಯನ ಒತ್ತಡದ ಬದುಕಿನ ಜಂಜಾಟದ ಮಧ್ಯೆ ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಂಗೀತ ನಮ್ಮಗಳ ಒತ್ತಡದ ಬದುಕಿಗೆ ಅತ್ಯವಶ್ಯಕವಾಗಿದ್ದು, ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ. ಸಂಗೀತ ಆಲಿಕೆ ಕುರಿತು ಯುವಕರು ಆಸಕ್ತಿ ಬೆಳೆಸಿಕೊಳ್ಳಿ. ಸಂಗೀತ ಗುನುಗುವುದರಿಂದ ಬಿಪಿ, ಶುಗರ್ ಕಡಿಮೆ ಮಾಡುತ್ತದೆ ಅಲ್ಲದೆ ಮಾನಸಿಕ ನೆಮ್ಮದಿಗೆ ಔಷಧಿಯಿದ್ದಂತೆ” ಎಂದು ಅಭಿಪ್ರಾಯಪಟ್ಟರು.

“ನನ್ನ ರಾಜಕೀಯ ಒತ್ತಡ ಬದುಕಿನ ಮಧ್ಯೆ ನಾನು ಕೂಡ ಸಂಗೀತಕ್ಕೆ ಮೊರೆಹೋಗಿದ್ದೇನೆ. ಬಿಡುವಿನ ವೇಳೆಯಲ್ಲಿ ಗಾಯನದ ಮೂಲಕ ಸಂಗೀತ ಹಾಡಲು ಕಲಿಯುವ ಉತ್ಸಾಹವಿದೆ. ಕ್ಲಾಸಿಕಲ್ ಸಂಗೀತ ಕಲಿಯುವೆ. ಈಗಾಗಲೇ ಬ್ಲೂಟುತ್ ಮೈಕ್ ಖರೀದಿಸಿದ್ದು, ಮುಂದಿನ ಬಾರಿ ಈ ವೇದಿಕೆಯಲ್ಲಿ ನಾನು ಸ್ವರ್ಧೆಗೆ ಬಾಗವಹಿಸುವೆ. ತೀರ್ಪುಗಾರರು ಶಾಸಕರೆಂದು ಮಾರ್ಕ್ ಕೊಟ್ಟು ಆಯ್ಕೆ ಮಾಡಬೇಡಿ. ಪ್ರಾಮಾಣಿಕವಾಗಿ ನನ್ನ ಲಯಬದ್ದ, ತಾಳ, ಸಂಗೀತಕ್ಕೆ ಅಂಕ ನೀಡಿ” ಎಂದ ಹಾಸ್ಯಮಯವಾಗಿ ಚಟಾಕಿಯೊಂದಿಗೆ ಸಂಗೀತಕ್ಕೆ ತಲೆದೂಗಿ ಪ್ರಶಂಸೆ ವ್ಯಕ್ತಪಡಿಸಿದರು.
“ಶುಕ್ರದೆಸೆ ನ್ಯೂಸ್ ಪತ್ರಿಕೆ ಮತ್ತು ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕ ಎಂ.ರಾಜಪ್ಪನವರು “ಸಮಾಜದಲ್ಲಿ ನಡೆಯುವಂತ ಸುದ್ದಿ ಸಮಾಚಾರ ಬಿತ್ತರಿಸುವುದರ ಜೊತೆ ಜೊತೆಗೆ ಇಂತ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿ ತೆರೆ ಮರೆಯಲ್ಲಿರುವ ಗಾಯಕ ಗಾಯಕಿಯರನ್ನು ಮುಖ್ಯವಾಹಿನಿಗೆ ಪರಿಚಯಿಸುವಂತ ಕೆಲಸ ಶ್ಲಾಘನೀವಾಗಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಿಜೆಪಿ ಯುವ ಮುಖಂಡ ಬಿಸ್ತುವಳ್ಳಿ ಬಾಬು ಮಾತನಾಡಿ ಸಂಸ್ಥೆಯು ಪ್ರತಿ ವರ್ಷವು ಕೂಡ ಸಂಗೀತ ಕರೋಕೆ ಗಾಯನ ಸ್ವರ್ಧೆಯನ್ನ ಏರ್ಪಡಿಸಿ ರಾಜ್ಯಮಟ್ಟದ ಗಾಯಕರನ್ನ ಕರೆತರುವ ಮೂಲಕ ಜಗಳೂರಿನ ಸಾಂಸ್ಕೃತಿಕ ಪರಂಪರೆ ಪರಿಚಯಿಸುವಂತ ಕಾರ್ಯಕ್ರಮಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ” ಎಂದು ಅಭಿನಂದಿಸಿದರು.

ಶಾಸಕರ ಸಲಹೆಯಂತೆ ಸ್ವರ್ಧಾಳುಗಳನ್ನ ಅಂತಿಮ ಸುತ್ತಿನವರೆಗೂ ತೀರ್ಪುಗಾರರು ಅಳೆದು ತೂಗಿ ಬಹುಮಾನ ಪ್ರಕಟಿಸಿದರು. ದಾವಣಗೆರೆ ಆಶಾರವರಿಗೆ ಪ್ರಥಮ ಬಹುಮಾನ 15000, ದ್ವೀತಿಯ ಸ್ಥಾನ ಪಡೆದ ಜಗಳೂರಿನ ನಿಖಿತಾರವರಿಗೆ 8000, ತೃತೀಯ ಸ್ಥಾನಕ್ಕೆ ಹಿರಿಯೂರಿನ ನಾಗವೀಣಾರವರಿಗೆ 5000 ಸಾವಿರ ಮತ್ರು ನಾಲ್ಕು ಜನ ಗಾಯಕರಾದ ಕೆಚ್ಚೆನಹಳ್ಳಿ ಪ್ರಸನ್ನ, ದಾವಣಗೆರೆ ನಿಜಗುಣ, ಹಾಲೇಶ್, ಪ್ರೇಮಾರವರಿಗೆ ಸಮಾಧಾನಕರ ಬಹುಮಾನ ನೀಡಿ ಕಲಾವಿದರಿಗೆ ಪ್ರೋತ್ಸಾಹಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ಪ್ರಕರಣ; ಮರ್ಯಾದೆ ಹತ್ಯೆ, ಸಾಮೂಹಿಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ದಲಿತ ಸಂಘಟನೆಗಳು
ಕಾರ್ಯಕ್ರಮದಲ್ಲಿ ಪಪಂ ಮುಖ್ಯ ಅಧಿಕಾರಿ ಲೋಕ್ಯಾನಾಯ್ಕ, ಶುಕ್ರದೆಸೆ ನ್ಯೂಸ್ ಪತ್ರಿಕೆ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ, ಮಾಜಿ ಪಪಂ ಅಧ್ಯಕ್ಷ ನಾಗೇಂದ್ರರೆಡ್ಡಿ, ರಾಜ್ಯ ಕಾಂಗ್ರೇಸ್ ಕಾರ್ಮಿಕ ಸಂಘಟನೆ ಕಾರ್ಯದರ್ಶಿ ಗುತ್ತಿದುರ್ಗ ರುದ್ರೇಶ್, ಮುಖಂಡರಾದ ಕೆಚ್ಚೆನಹಳ್ಳಿ ಹನುಮಂತಣ್ಣ, ತೀರ್ಪುಗಾರರಾದ ಅಣ್ಣಪ್ಪ, ಅಜೇರ್, ಸುರೇಶ್, ಚಿತ್ರದುರ್ಗಗಾಯಕ ನಾಗೇಶ್ ಹುಚ್ಚಂಗೀಪುರ, ಮುಖಂಡ ಅರ್ಜುನಪ್ಪ, ಕಾಂಗ್ರೇಸ್ ಮಹಿಳಾ ಘಟಕದ ಜಯಲಕ್ಷ್ಮೀ, ಗಾಯಕಿ ಸುಮಾ, ಮಂಜುನಾಥ, ಹಾಲೇಶ್ ಸೇರಿದಂತೆ ಮುಂತಾದವರು ಹಾಜರಿದ್ದರು.